ಶುಕ್ರವಾರ, ಮಾರ್ಚ್ 27, 2009

-:ಯುಗಾದಿ:-

ನಮ್ಮ ನಿಮ್ಮ ಜೀವ-ಭಾವಕೊ೦ದು
ಮೇರೆಮೀರಿ ಕಲ್ಪ ತರುವ ಭರವಿದು.ಮನುಜ ಮನದ ಆಸೆಗಳನು ಹೊಸೆದು
ಬೆಸೆದು ಜೀವಕೊಡುವ ಚೈತ್ರದಿನವಿದುವರುಷಕೆಲ್ಲ ಹೊಸತು ಹರುಷವನ್ನು
ಹೊತ್ತುತರುವ ನವ ಶುಭದಿನವಿದು


ವರುಷದಲ್ಲಿ ಸಿಹಿಯು ಇರಲಿ ಕಹಿಯೆ ಬರಲಿ
ಸಮವ ಹ೦ಚಿಕಳೆವ ತಾಳ್ಮೆ ಬಾಳ್ವೆಯಿರಲಿರುಚಿಯಅಡುಗೆ ಜೊತೆಗೆ ನೀತಿಯುಡುಗೆಯಿರಲಿ
ದಿನದಿನಕೂ ಸತತ ರಸದ ಹಸಿರ ಲೇಪವಿರಲಿಕ್ಷಣಕ್ಷಣವೂ ಕಳೆದ ಸಮಯಕೊ೦ದು ಅರ್ಥವಿರಲಿ
ಆತ್ಮತೃಪ್ತಿ ತರುವ ಕಾರ್ಯ ಗುರಿಯ ತಲುಪುತಿರಲಿನಿತ್ಯಸತ್ಯದಿ ನಮಿಪ ಹಿರಿಯರೆಲ್ಲ ಹರಸುತಿರಲಿ
ನಮ್ಮ ನಿಮ್ಮ ಪ್ರೀತಿ ಸದಾ ಹೀಗೆ ಹರಿಯುತಿರಲಿ!
ಕಾಮೆಂಟ್‌ಗಳಿಲ್ಲ: