"ಹೊಸ ಹರುಷ"
ಚಿಗುರ ಚಿಮ್ಮುತ ಜುಮ್ಮನೆ ಬಂದ ವಸಂತ
ಹಗುರ ಮಾಡುತ ಬಿಮ್ಮನೆ ನಮ್ಮ-ನಿಮ್ಮ ಮನಸ.
ಹಸಿರ ಸಿರಿಗೆ ಫಸಲ ಹೊಚ್ಚಿ
ಬೆಚ್ಚಗಿರಿಸಿದ
ಹುಚ್ಚು ಕನಸ ಬಿಚ್ಚಿ ಇರಿಸಿ
ಬದುಕ ಹಚ್ಚಿದ
ಹೂವು-ಮಾವು ಚಿಗುರ ತಳಿರು ತೋರಣ ಕಟ್ಟಿದ
ಬೇವು-ಬೆಲ್ಲ ಹಂಚಲೆಂದು ನಮ್ಮನಿಂದು ಅಟ್ಟಿದ!
ಹೊಸದು ವರುಷ ಇರಲಿ ಹರುಷ ನಿಮ್ಮ ಬಾಳಲಿ.
ಕಷ್ಟ-ಸುಖವ ಹಂಚಿಕೊಂಡು ನೂರು ವರುಷ ಸಾಗಿರಿ!!
-ವೆಂಕಟೇಶ ದೊಡ್ಮನೆ, ಬೆಂಗಳೂರು