ಗುರುವಾರ, ಜೂನ್ 25, 2020



ನಾಟಿ ವೈದ್ಯರತ್ನ ನರಸೀಪುರದ ಶ್ರೀ ನಾರಾಯಣಮೂರ್ತಿಯವರು:


ಶ್ರೀ ನಾರಾಯಣ ಮೂರ್ತಿಯವರ ಬಗ್ಗೆ ಅರಿಯುವ ಮುನ್ನ ಒಂದಷ್ಟು ಸತ್ಯ ಸಂಗತಿಗಳನ್ನು ಚರ್ಚಿಸೋಣ.

'ನಮಗೆ ನಮ್ಮ ವೈದ್ಯ ಪದ್ದತಿಗಳ ಬಗ್ಗೆಯೇ ಯಾಕಿಷ್ಟು ತಾತ್ಸಾರ?' ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಅನೇಕ ಸತ್ಯಸಂಗತಿಗಳು ಗೋಚರಿಸುತ್ತವೆ.

ಭಾರತದ ಮೇಲೆ ವಿದೇಶೀಯರ ನಿರಂತರ ಧಾಳಿಯ ನಂತರ ಭಾರತೀಯರು ಅನೇಕ ಮೌಲ್ಯಗಳನ್ನು ಮರೆತುಬಿಟ್ಟರು. ವಿದೇಶಿಯರು ನಮ್ಮ ಪದ್ಧತಿಗಳನ್ನು ಹೊಸಕಿಹಾಕಲು ಪ್ರಯತ್ನಿಸಿದರು. ಋಷಿಮುನಿಗಳ ಶ್ರಮತಪಸ್ಸಿನ ಫಲವಾಗಿ ದೊರೆತ ನಮ್ಮ ಅನೇಕ ಸಂಸ್ಕೃತ ಗ್ರಂಥಪಠ್ಯಪುರಾಣ ಪುಣ್ಯ ಪುಸ್ತಕಗಳನ್ನು ನಾಶ ಮಾಡಿದರು. ಹೊಡೆತಕ್ಕೆ ಸಿಕ್ಕಿದ ನಮ್ಮ ಅಮೂಲ್ಯ ಭಂಡಾರಗಳಲ್ಲಿ ಆಯುರ್ವೇದ/ಗಿಡಮೂಲಿಕಾ ವೈದ್ಯಪದ್ಧತಿಯೂ ಒಂದು. ವಿದೇಶಿಯರು ತಮ್ಮ ಹೊಸ ಪದ್ಧತಿಗಳನ್ನು ಜಾರಿಗೊಳಿಸಿಭಾರತೀಯರಿಗೆ ತಮ್ಮ ಔಷಧಗಳ ಬಗ್ಗೆಯೇ ಅಸಹ್ಯ ಹುಟ್ಟುವಂತೆ ಮಾಡಿದರು. ಹೀಗೆ ಕೆಲವು ಶತಮಾನಗಳ ಕಾಲ ಭಾರತೀಯರಿಗೆ ತಮ್ಮ ಮೂಲ ಪದ್ಧತಿಗಳ ಬಗ್ಗೆ ಅರಿವೇ ಇಲ್ಲದಂತಾದಾಗ ನಮ್ಮ ನಾಡಿನಲ್ಲಿ ಮತ್ತೆ ಪಂಡಿತರು ಅವತರಿಸಿದರು. ಮರೆತುಹೋದನಾಶಪಡಿಸಿದ ಜ್ಞಾನವನ್ನು ಅಳಿದುಳಿದ ಗ್ರಂಥಗಳ ಸಹಾಯದಿಂದ ಮತ್ತು ತಮ್ಮ ಹೊಸಹೊಸ ಪ್ರಯೋಗಗಳಿಂದ ಪುನಶ್ಚೇತನ ಗೊಳಿಸಿದರು. ಅಳಿವಿನ ಅಂಚಿನಲ್ಲಿ ಇದ್ದ ಆಯುರ್ವೇದ ವಿದ್ಯೆಯನ್ನು ಪುನಃ ಪ್ರಾರಂಭಿಸಿದರು. ಅಮೂಲ್ಯ ಭಾರತೀಯ ವೈದ್ಯರ ಮೂಲಕತಲೆಮಾರಿನಿಂದ ತಲೆಮಾರಿಗೆವಂಶಪಾರಂಪರ್ಯವಾಗಿ ಹಾಗೂ ಗುರು-ಶಿಷ್ಯ ಪರಂಪರೆಯ ಮೂಲಕ ಮತ್ತೆ ನಮ್ಮ ಪುರಾತನ ವೈದ್ಯಕೀಯ ಪದ್ಧತಿ ಚೇತರಿಸಿಕೊಂಡಿತು.

ಕ್ಯಾನ್ಸರ್ ಗುಣಪಡಿಸಲಾಗದ ರೋಗ ರೋಗ ಬಂತೆಂದರೆ ವ್ಯಕ್ತಿ ಬದುಕುಳಿಯುವುದು ಕಷ್ಟಆಪರೇಶನ್ ಇಲ್ಲದೆ ಗುಣಮುಖರಾಗುವುದಕ್ಕೆ ಸಾಧ್ಯವೇ ಇಲ್ಲ....’ ಎಂದೆಲ್ಲಾ ಹೇಳಿ ಅನೇಕ ರೋಗಿಗಳನ್ನು ಗುಣಪಡಿಸಲಾಗದೇ ಆಸ್ಪತ್ರೆಯಿಂದ ಮನೆಗೆ ಕಳಿಸಿದ್ದು ಇದೇ ಆಲೋಪತಿ (ಪಾಶ್ಚಿಮಾತ್ಯ) ವೈದ್ಯಪದ್ಧತಿ. ಆದರೆ ಕ್ಯಾನ್ಸರನ್ನು ಸಮರ್ಥವಾಗಿ ಎದುರಿಸಿ ಬದುಕಲು ಸಾಧ್ಯವಿಲ್ಲದ ರೋಗಿಗಳನ್ನು ಉಳಿಸಿದ್ದು ಇದೇ ಆಯುರ್ವೇದ-ನಾಟೀ (ಭಾರತೀಯ) ವೈದ್ಯ ಪದ್ದತಿ. ಕ್ಯಾನ್ಸರ್ ಗೆಡ್ಡೆಯನ್ನು ಆಪರೇಷನ್ ಇಲ್ಲದೆಯೇಔಷಧಕೊಟ್ಟು ಕರಗಿಸಿ ಇಲ್ಲವೇ ಹೊಟ್ಟೆಯಿಂದ ಹೊರಗೆ ಬರುವಂತೆ ಮಾಡುವಲ್ಲಿ ನಮ್ಮ ನಾಟಿವೈದ್ಯರು ನಿರಂತರವಾಗಿ ಯಶಸ್ವಿಯಾಗಿದ್ದಾರೆ.

ನೀವಿಂದು ಇದನ್ನ ಆಯುರ್ವೇದ ಎಂದು ಕರೆಯಿರಿಗಿಡಮೂಲಿಕಾ ಔಷಧಪದ್ಧತಿ ಎಂದಾದರೂ ಕರೆಯಿರಿ ಅಥವಾ ನಾಟಿವೈದ್ಯ ಎಂಬ ಗ್ರಾಮ್ಯ ಭಾಷೆಯಲ್ಲಾದರೂ ಗುರುತಿಸಿ ಇವೆಲ್ಲವೂ ಪ್ರಕೃತಿಯ ಜೊತೆಗೇ ಬೆಳೆದ ನಮ್ಮ ಪುರಾತನ ವೈದ್ಯ ಪದ್ಧತಿಗಳೇ ಆಗಿವೆ. ನಮ್ಮ ವೈದ್ಯ ಪದ್ಧತಿಗಳಲ್ಲಿ ಹೊಟ್ಟೆಗೆ ಔಷಧ ಕೊಡುವುದೊಂದೇ ಅಲ್ಲರೋಗವನ್ನು ಗುಣಪಡಿಸಲು ಮತ್ತು ರೋಗಗಳೇ ಬಾರದಂತೆ ತಡೆಯಲು ಅನೇಕ ವಿಧಾನಗಳಿವೆ. ಅವುಗಳಲ್ಲಿ ಯೋಗಜಪಧ್ಯಾನಪ್ರಾಣಾಯಾಮಮಣ್ಣು ಮತ್ತು ಜಲಚಿಕಿತ್ಸೆರೇಖಿಹಿಪ್ನಾಟಿಸಮ್ಆಕ್ಯುಪ್ರಷರ್ ಮತ್ತು ಆಕ್ಯುಪಂಚರ್ (ಇಂದು ಇದನ್ನು ಚೀನೀ/ಜಪಾನಿನ ಚಿಕಿತ್ಸೆಯೆಂದು ಗುರುತಿಸಿದರೂ ಇದರ ಮೂಲ ಭಾರತವೇ)ಕಾಯಕಲ್ಪಉಪವಾಸ ಮತ್ತು ಪಥ್ಯಮಾಲೀಸು (Massage) ಮುಂತಾದುವುಗಳು ಪ್ರಮುಖವಾದ ಪ್ರಕಾರಗಳು. ಶಸ್ತ್ರಚಿಕಿತ್ಸಾ ಪಿತಾಮಹರಾದ ಚರಕ-ಸುಶ್ರಿತರಿಂದ ಆರಂಭವಾದಆಪರೇಷನ್ ಚಿಕಿತ್ಸೆ ಮೂಲವೂ ಭಾರತದ್ದೇ ಎಂಬುದು ನಿಮಗೆ ಗೊತ್ತಿರಬಹುದು,
ಆಯುರ್ವೇದ ಮತ್ತು ನಾಟಿ ವೈದ್ಯ ಪದ್ಧತಿಯಲ್ಲಿ ಮುಖ್ಯವಾಗಿ ಪ್ರಕೃತಿಯಲ್ಲಿ ಸಿಗುವ ಸಸ್ಯ ಮತ್ತು ಪ್ರಾಣಿ ಮೂಲದಿಂದ ಬಹುತೇಕ ಔಷಧಗಳನ್ನು ತಯಾರು ಮಾಡುತ್ತಾರೆ. ಮರ/ಗಿಡದ ಚಕ್ಕೆ-ತೊಗಟೆಸೊಪ್ಪುಹೂವುಕಾಯಿಬೇರು ಹಾಗೂ ಹಣ್ಣನ್ನು ಉಪಯೋಗಿಸಿ ಸಸ್ಯಮೂಲದ ಔಷಧ ತಯಾರು ಮಾಡಿದರೆಪ್ರಾಣಿಮೂಲದ ಹಾಲುಮೊಸರುತುಪ್ಪಸಗಣಿ ಮತ್ತು ಮೂತ್ರದಿಂದ ಕೆಲವು ಔಷಧಗಳನ್ನು ತಯಾರು ಮಾಡುತ್ತಾರೆ. ಕೆಲವು ಔಷಧಗಳನ್ನು  ಪ್ರಾಣಿ ಮತ್ತು ಸಸ್ಯ ಮೂಲದ ಪರಿಕರಗಳನ್ನು ಬೆರೆಸಿಮಿಶ್ರಣವನ್ನು ಔಷಧವಾಗಿ ಬಳಸುತ್ತಾರೆ. ಕೃತಕ ಮತ್ತು ರಾಸಾಯನಿಕ ವಸ್ತುಗಳನ್ನು ಬಳಸದೇ ಔಷಧ ತಯಾರು ಮಾಡುವುದರಿಂದ ಸೇವಿಸಿದವರಿಗೆ ಯಾವ ದುಷ್ಪರಿಣಾಮಗಳೂ ಆಗುವುದಿಲ್ಲ. ಔಷಧದ ಪರಿಣಾಮ ನಿಧಾನವೇ ಆದರೂ ಶಾಶ್ವತ ಪರಿಹಾರ ಎಂದು ವೈದ್ಯರು ಹೇಳುತ್ತಾರೆ

ಕೆಲವೊಮ್ಮೆ ಅನುಕೂಲಕ್ಕಾಗಿ ಮರದ ಕಾಯಿಚಕ್ಕೆಯನ್ನು ಹಸಿಯಾಗಿ  ಇಲ್ಲವೇ ಒಣಗಿಸಿಪುಡಿಮಾಡಿ ಬಳಸುತ್ತಾರೆ. ಸೊಪ್ಪು ಮತ್ತು ಹೂವುಗಳನ್ನು ಹಸಿಯಾಗಿ ಅರೆದು ಇಲ್ಲವೇ ಒಣಗಿಸಿ ಬೇರೆ ಪದಾರ್ಥಗಳ ಜೊತೆ ಸೇವಿಸಲು ತಿಳಿಸುತ್ತಾರೆ. ಇದಕ್ಕಾಗಿ ಆಯುರ್ವೇದ ಶಾಸ್ತ್ರವೇ ಇರುವಾಗ ಇದು ಎಷ್ಟು ದೊಡ್ಡ ವಿಭಾಗವೆಂದು ನೀವು ಊಹಿಸಬಹುದು. ನಾಟಿವೈದ್ಯರಿಗೆ ಆಧುನಿಕ ತರಬೇತಿ ಮತ್ತು ಸರ್ಟಿಫಿಕೇಟುಗಳಿಗಿಂತ ಹೆಚ್ಚಾಗಿ ವಂಶಪಾರಂಪರ್ಯವಾಗಿ ಬಂದ ಜ್ಞಾನವೇ ಹೆಚ್ಚು ಪ್ರಧಾನವಾಗುತ್ತದೆ. ಇದರ ಜತೆಗೆ ಪ್ರತೀ ನಿತ್ಯದ ಹೊಸ ಅನುಭವಗಳು ಯಶಸ್ವೀ ವೈದ್ಯನನ್ನಾಗಿ ಮಾಡುತ್ತವೆ. ಉತ್ತಮ ವೈದ್ಯರಿಗೆ ಸಾಮಾನ್ಯವಾಗಿ ಮುಖಚಹರೆಕೈಗುಣ ಹಾಗೂ ದೈವೀ ಶಕ್ತಿಗಳು ಇರುತ್ತದೆ ಎಂಬ ನಂಬಿಕೆ ಜನಮಾನಸದಲ್ಲಿದೆ. ಹೀಗಾಗಿ ಆಯುರ್ವೇದನಾಟೀವೈದ್ಯಕೀಯ ಪದ್ಧತಿಯನ್ನು ಉಳಿಸಿಕೊಂಡುಬೆಳೆಸಿಕೊಂಡುಮುಂದುವರೆಸಿಕೊಂಡು ಹೋಗುವುದರಲ್ಲಿದೆ ನಮ್ಮ ಭಾರತೀಯತೆ.
ಹೀಗೆ ಅಗಾಧತೆಯಿಂದ ಶಕ್ತಿಸಂಪನ್ನವಾಗಿರುವ  ನಮ್ಮ ವೈದ್ಯಕೀಯ ಪದ್ಧತಿಗೆ ಅನೇಕರು ತಮ್ಮ ಅಮೂಲ್ಯ ಕಾಣಿಕೆಯನ್ನು ಇತ್ತಿದ್ದಾರೆ. ನಮ್ಮ ಸುತ್ತಮುತ್ತ ನೋಡುತ್ತಾ ಹೋದರೆ ಬ್ರಾಹ್ಮಣರ ಪಾಲು ಹೆಚ್ಚು. ಅದರಲ್ಲಿ ಹವ್ಯಕರು ತಾವೂ ಕಡಿಮೆಯಿಲ್ಲ ಎನ್ನುವಂತೆ ಇಂದಿಗೂ ತಮ್ಮ ಹೆಸರನ್ನು ಕೈಗುಣವನ್ನು ಉಳಿಸಿಕೊಂಡು ಸಮಾಜಕ್ಕೆ ಉಪಕಾರ ಮಾಡುತ್ತಿದ್ದಾರೆ.

ಶಿವಮೊಗ್ಗ ಪ್ರಾಂತ್ಯದಲ್ಲಿ ಹೀಗೆ ನೆನಪು ಮಾಡಿಕೊಳ್ಳುತ್ತಾ ಹೋದರೆ ಕೆಲವೇ ನಾಟಿವೈದ್ಯರಲ್ಲಿ ತಕ್ಷಣ ಬೆರಳೆಣಿಕೆಗೆ ಸಿಗುವವರು ನರಸೀಪುರದ ಶ್ರೀ ನಾರಾಯಣ ಮೂರ್ತಿಯವರು.
 ಇವರು ಬಹುಶಃ ಕರ್ನಾಟಕಕ್ಕಿಂತ ತಮಿಳುನಾಡುಆಂಧ್ರಪ್ರದೇಶತೆಲಂಗಾಣಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಸಿದ್ಧರು. ನೀವು ಯುಟ್ಯೂಬಿನಲ್ಲಿ (youtube) ತಡಕಾಡಿದರೆ ಇವರ ಬಗ್ಗೆ ಅನೇಕ ವಿಡಿಯೋಗಳು ದೊರಕುತ್ತವೆ. ಇವೆಲ್ಲಾ ನಾರಾಯಣ ಮೂರ್ತಿಯವರು ಹೇಳಿ ಮಾಡಿಸಿದ್ದಲ್ಲ. ಇದೆಲ್ಲಾ ಆಯಾ ಭಾಷೆಗಳಲ್ಲಿ ಆಯಾ ರಾಜ್ಯದ ಟಿ,ವಿ.ಚಾನಲ್ ಗಳುಉಪಕೃತರಾದವರು ಹಾಗೂ ಆಸಕ್ತರು ಸಂದರ್ಶನ ಮಾಡಿ ತಯಾರಿಸಿದ ವಿಡಿಯೋಗಳು. ಹಾಗೆ ನೋಡಿದರೆ ಇವರ ಸುತ್ತಮುತ್ತಲ ಜನರಿಗೆ ಇವರ ಮಹತ್ವ ಅರ್ಥವಾಗಿದ್ದು ಕಡಿಮೆ ಎಂದೆನಿಸುತ್ತದೆ. ’ದೀಪದ ಬುಡ ಕತ್ತಲೆಎಂಬ ಗಾದೆ ಸುಳ್ಳಾದೀತೇ?

ನಾರಾಯಣಮೂರ್ತಿಯವರನ್ನು ಸಂದರ್ಶಿಸಿಒಂದಷ್ಟು ಮಾಹಿತಿ ಕಲೆಹಾಕಿ ಲೇಖನ ಬರೆಯುವುದು ನನ್ನ ಉದ್ದೇಶವಾಗಿತ್ತು. ಅವರ ಮನೆಯ ಮುಂದೆ ಉದ್ದವಾದ ಕ್ಯೂ ಇದ್ದರೂಅವರು ಹೇಗೂ ನನ್ನ ನೆಂಟರುಎಂಬ ಸಲುಗೆಯಿಂದ ಅವರನ್ನು ಭೇಟಿಯಾಗಲು ನೇರವಾಗಿ ಹೋದೆ. ಆದರೆ ಅಂದು ಅವರು ಮಾತಿಗೆ ಸಿಗಲೇ ಇಲ್ಲ. ಕರೆದು ಮಾತನಾಡಿಸಿದಾಗ ಇದರಬಗ್ಗೆ ನಿರಾಸಕ್ತಿ ತೋರಿಇಷ್ಟೆಲ್ಲಾ ರೋಗಿಗಳ ಮಧ್ಯೆ ಮಾತನಾಡಲು ಆಗುವುದಿಲ್ಲಅವರು ಬೆಳಗ್ಗಿನಿಂದಲೇ ನಿಂತಿದ್ದಾರೆಅವರ ಕ್ಷೇಮ ನನಗೆ ಮುಖ್ಯ ಎನ್ನುತ್ತಾ ಕುರ್ಚಿಯಿಂದ ಎದ್ದು ಹೊರಟೇಬಿಟ್ಟರು. ನಾನು ಹಿಂಬಾಲಿಸುತ್ತಾಹಾಗಾದರೆ ನಾಳೆ ಬೆಳಿಗ್ಗೆ ಬರಲಾ ಎಂದಾಗಸರಿ ಎನ್ನುತ್ತಾ ಸರಸರನೆ ನಡೆದು ತಮ್ಮ ವೈದ್ಯಸೀಟಿನಲ್ಲಿ ಹೋಗಿಕುಳಿತುಬಿಟ್ಟರು! ನನಗೆ ಬೇಸರವಾಗಲಿಲ್ಲ ಬದಲಿಗೆ ಇನ್ನೂ ವಿಶ್ವಾಸ ಹೆಚ್ಚಾಯಿತು.

ಆಗ ನನಗೆ ಕ್ಯೂನಲ್ಲಿದ್ದವನ್ನು ಮಾತನಾಡಿಸಲು ಅವಕಾಶ ಸಿಕ್ಕಿತು. ಅವತ್ತು ಅಲ್ಲಿಗೆ ಒಬ್ಬರು ಮಹಾರಾಷ್ಟ್ರದಿಂದ ತಮ್ಮ ತಾಯಿಯ ಚಿಕಿತ್ಸೆಯ ಔಷಧಿಗಾಗಿ ಬಂದಿದ್ದರು. ಪರಿಚಯವಿಲ್ಲದಿದ್ದರೂ ಅವರನ್ನು ನಾನು ಮಾತಿಗೆಳೆದೆಇಂಗ್ಲೀಷ್ ಮತ್ತು ಹಿಂದಿ ಬಲ್ಲವರಾದ್ದರಿಂದ ನನಗೆ ಸಲೀಸಾಯಿತು. ವೃತ್ತಿಯಲ್ಲಿ ಇಲೆಕ್ಟ್ರಾನಿಕ್ಸ್/ಐಟಿ ಇಂಜಿನಿಯರ್ ಆಗಿರುವ ಸಂಜೀವ್ ಕುಲಕರ್ಣಿಯವರ ತಾಯಿಗೆ ಈಗ 72 ವರ್ಷ. ಸುಮಾರು ಎರೆಡು ವರ್ಷದ ಹಿಂದೆ ತಾಯಿಗೆ ಇದ್ದಕ್ಕಿದ್ದಂತೆ ವಾಂತಿಯಾಗಲು ಶುರುವಾದಾಗ ಅಲ್ಲಿಯ ಡಾಕ್ಟರಿಗೆ ತೊರಿಸಿದರಂತೆ. ಡಾಕ್ಟರ್ ಪರೀಕ್ಷಿಸಿಇದು ಕ್ಯಾನ್ಸರ್ಈಗಾಗಲೇ Advanced Stage ಗೆ ಹೋಗಿರೋದ್ರಿಂದ ಉಳಿಸೋದು ಕಷ್ಟ ಎಂದರು. ಆದರೂ ಹೆತ್ತ ತಾಯಿಯಲ್ಲವೇಹೇಗಾದರೂ ಉಳಿಸಿಕೊಳ್ಳೋಣ ಎಂದು ಅಲ್ಲಿಯ ಒಂದು ಹೆಸರಾಂತ ಆಸ್ಪತ್ರೆಗೆ ಸೇರಿಸಿದರು. ಡಾಕ್ಟರು ಮತ್ತೆ ಏನೇನೋ ಪರೀಕ್ಷೆ ಮಾಡಿದರುಗೊತ್ತಿರುವ ಚಿಕಿತ್ಸೆಯೆನ್ನೆಲ್ಲಾ ನೆರವೇರಿಸಿದರು. ಇನ್ನು ಆಪರೇಶನ್ ಮಾಡುವುದೊಂದೇ ಬಾಕಿಆದರೆ ಶುಗರ್ ಮತ್ತು ವಯಸ್ಸಿನ ಕಾರಣ ಆಪರೇಷನ್ ಮಾಡಿ ಉಳಿಸಿಕೊಳ್ಳುವುದು ಕಷ್ಟ ಎಂದರು.
ಏನು ತಿಂದರೂ ವಾಂತಿ ಆಗುತ್ತಿರುವಾಗ ದಿನದಿನಕ್ಕೂ ಆರೋಗ್ಯ ಹದಗೆಡುತ್ತಾಹೋಯಿತುಕೆಲವು ತಿಂಗಳುಗಳೇ ಕಳೆದು ಹೋದವು. ಅದುವರೆಗೂ ಆಸ್ಪತ್ರೆಯಲ್ಲಿ ದಿನಕ್ಕೆ 21 ಸಾವಿರ ರೂಪಾಯಿಯಂತೆ ಸುಮಾರು 14ಲಕ್ಷ ಖರ್ಚು ಮಾಡಿದ್ದರು ಮಗ ಸಂಜೀವ್ ಕುಲಕರ್ಣಿ. ಆದರೂ ಸುಧಾರಣೆ ಕಾಣದಿದ್ದಾಗ ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು.
ಹೀಗೇ ಒಂದು ದಿನ ಇಂಟರ್ನೆಟ್ ಯೂಟ್ಯೂಬಿನಲ್ಲಿ ಹುಡುಕುತ್ತಿರುವಾಗ ವೈದ್ಯ ನಾರಾಯಣ ಮೂರ್ತಿಯವರ ವಿಡಿಯೋ ಸಿಕ್ಕಿತಂತೆ. ಅದನ್ನು ಇಳಿಸಿಉಳಿಸಿಕೊಂಡುಅಡ್ರಸ್ ಹುಡುಕಿಕೊಂಡು ಶಿವಮೊಗ್ಗಕ್ಕೆ ಬಂದಿಳಿದು ಅಲ್ಲಿಂದ ಹೇಗೋ ದಾರಿ ಹುಡುಕಿ ನರಸೀಪುರಕ್ಕೆ ಬಂದು ನಾರಾಯಣಮೂರ್ತಿಯವರಲ್ಲಿ ಬಿನ್ನವಿಸಿಕೊಂಡರು.
ನಾರಾಯಣ ಮೂರ್ತಿಯವರುಹಿಂದಿನ ಡಾಕ್ಟರ ವರದಿಗಳುಚಿಕಿತ್ಸೆಯ ವಿವರಗಳನ್ನು ನೋಡಿನಮ್ಮ ಪ್ರಯತ್ನ ಮಾಡೋಣಉಳಿಸಿಕೊಳ್ಳುವ ಭರವಸೆ ಇದೆ ಎಂದು ಔಷಧ ಕೊಟ್ಟರಂತೆ. ಔಷಧ ತೆಗೆದುಕೊಂಡ ಕೂಡಲೇ ವಾಂತಿ ನಿಂತುಹೋಯಿತುನಿಧಾನವಾಗಿ ಆಹಾರ ಹೊಟ್ಟೆಗೆ ಹೋಯಿತು. ದಿನದಿನಕ್ಕೆ ಚೇತರಿಸಿಕೊಂಡು ಮತ್ತೆ ಎದ್ದು ಕುಳಿತರು ಅಮ್ಮ! ಅಂದರೆ ಇದು ನಡೆದಿದ್ದು ಈಗ್ಗೆ ಸುಮಾರು ಹತ್ತು ತಿಂಗಳ ಹಿಂದೆ (Nov'17).  ಈಗ ಆರಾಮವಾಗಿ ನಡೆದಾಡುತ್ತಾರೆಊಟಮಾಡುತ್ತಾರೆನಮ್ಮೊಂದಿಗೆ ಸಂತಸದಿಂದ ಇದ್ದಾರೆ. ಇಂದು ನನ್ನ ತಾಯಿಯನ್ನು ನನ್ನ ಕಣ್ಣೆದುರೇ ನೋಡುತ್ತಿದ್ದೇನೆಂದರೆ ಅದಕ್ಕೆ ಕಾರಣ ಇದೇ ನಾರಾಯಣ ಮೂರ್ತಿಯವರ ಔಷಧ ಎಂದು ಕೃತಜ್ಞತಾಭಾವದಿಂದ ಸ್ಮರಿಸಿಕೊಳ್ಳುವಾಗ ಕುಲಕರ್ಣಿಯವರ ಕಣ್ಣಂಚಿನಲ್ಲಿ ನೀರಹನಿ ಹರಿದಿತ್ತು. ನನಗೆ ಕರ್ನಾಟಕವೆಂದರೆ ಎರೆಡು ನಾರಾಯಣ ಮೂರ್ತಿಗಳು  ಗೊತ್ತಿದ್ದಾರೆಒಬ್ಬರು ಇನ್ಫೋಸಿಸ್ ಪಿತಾಮಹ ನಾರಾಯಣ ಮೂರ್ತಿಮತ್ತೊಬ್ಬರು ನರಸೀಪುರದ ವೈದ್ಯ ನಾರಾಯಣಮೂರ್ತಿ ಎನ್ನುತ್ತಾರೆ ಕುಲಕರ್ಣಿಯವರು. ಈಗ ಬಂದಿರುವುದು ಮತ್ತೆ ಔಷಧ ತೆಗೆದುಕೊಂಡು ಹೋಗಲುಇನ್ನೊಮ್ಮೆ ಬರುವಾಗ ಅಮ್ಮನನ್ನು ಕರೆದುಕೊಂಡು ಬರುತ್ತೇನೆತನ್ನನ್ನು ಉಳಿಸಿದ ವೈದ್ಯರನ್ನು ನೋಡಬೇಕಂತೆ ಅವರಿಗೆ" ಎಂದಾಗ ನಮಗೆ ನಮ್ಮ ಮೂರ್ತಿಯವರ ಬಗ್ಗೆ ಅಭಿಮಾನ ಮೂಡದಿರುತ್ತದೆಯೇ?.

ನಾನಿಲ್ಲಿ ಇನ್ನೊಂದು ಉದಾಹರಣೆ ಕೊಡಲು ಬಯಸುತ್ತೇನೆ.

ನಿಮಗೆ ಸಾಗರ ತಾಲ್ಲೂಕುತಾಳಗುಪ್ಪದ ಹತ್ತಿರ ಇರುವ ಚೂರಿಕಟ್ಟೆ ಗೊತ್ತಿರಬಹುದಲ್ಲಅಲ್ಲಿ ಶ್ರೀ ಲಕ್ಷ್ಮೀನಾರಾಯಣ ಹೆಗಡೆ ಮತ್ತು ಗಂಗಾಭವಾನಿ ಎಂಬ 70 ಆಸುಪಾಸಿನ ದಂಪತಿಯಿದ್ದಾರೆ. ಈಗೊಂದು ನಲವತ್ತು ವರ್ಷದ ಹಿಂದೆ ಗಂಗಕ್ಕನಿಗೆ ಒಂದು ವಿಚಿತ್ರವಾದ ಖಾಯಿಲೆ ಹತ್ತಿಕೊಂಡಿತು. ದಿನದಿನವೂ ಹೊಟ್ಟೆ ಉಬ್ಬುತ್ತಾ ಹೋಯಿತುಮೊದಮೊದಲು ಮತ್ತೊಂದು ಮಗುವಿನ ಬಸುರಿ ಇರಬಹುದು ಅಂದು ಕೊಂಡರಂತೆ. ಆದರೆ ದಿನದಿನವೂ ವೇಗವಾಗಿ ಬೆಳೆಯುತ್ತಿದೆಸಹಿಸಲಸಾಧ್ಯವಾದ ನೋವು. ಹತ್ತಿರದ ಡಾಕ್ಟರಿಗೆ ತೋರಿಸಿದ್ದಾಯಿತುಸಾಗರಶಿವಮೊಗ್ಗ ಎಲ್ಲಾ ಆಯಿತು. ನಂತರ ಮಣಿಪಾಲಿಗೆ ಹೋದರೆ ಪರಿಹಾರವಾಗುತ್ತದೆ ಎಂದು ಯಾರೋ ಹೇಳಿದರು. ಅದೂ ಆಯಿತುಅಲ್ಲಿ ಕೆಲವು ದಿನ ಇದ್ದು ಬಂದರೂ ಯಾವ ಪರಿಣಾಮವೂ ಆಗಲಿಲ್ಲ. ಅನೇಕ ಡಾಕ್ಟರರು ಇದನ್ನು ನೋಡಿ ಇದೊಂದು ಅರ್ಥವಾಗದ ಖಾಯಿಲೆ ಅಂದರಂತೆ.  ಮುಂದಿನದು ಇದೆಯಲ್ಲದೇವರಿಗೆ ಹರಕೆ ಮತ್ತು ಉಳಿದ ಮನೆಯೌಷಧಿ. ಊಹುಂಯಾವುದಕ್ಕೂ ಜಗ್ಗದ ಹೊಟ್ಟೆಯ ಗಾತ್ರ ವಿಪರೀತ ಹೆಚ್ಚಾಯಿತು. ಇಂದು ಲಚ್ಚಣ್ಣ ವಿವರಿಸುವಾಗ ಹೇಳುವ ಗಾತ್ರ ನೋಡಿದರೆ ಸುಮಾರು ಮೂರ್ನಾಲ್ಕು ಮಕ್ಕಳು ಹೊಟ್ಟೆಯಲ್ಲಿರುವರೋ ಎಂಬಂತೆ ತೋರುತ್ತದೆ! ಪಾಪಲಚ್ಚಣ್ಣ ಬಡವತೋಟವಿಲ್ಲಗದ್ದೆಯಿಲ್ಲಕೈಯಲ್ಲಿದ್ದ ದುಡ್ಡೆಲ್ಲಾ ಖರ್ಚಾಗಿದೆಅದರ ಮೇಲೆ ಸಾಲದ ಹೊರೆಯೂ ಇದೆ. ಇನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದುಕೊಂದರೂಮನಸ್ಸು ಕೇಳಲೊಲ್ಲದು. ಮನೆಯಲ್ಲೇ ಗಂಗಕ್ಕನನ್ನು ಚಾಪೆಯ ಮೇಲೆ ಮಲಗಿಸಿ,  ಮುಂದೇನು ಎನ್ನುತ್ತಾ ತಲೆಮೇಲೆ ಕೈಹೊತ್ತು ಕುಳಿತರು. ಆಗ ಯಾರೋ ಒಬ್ಬರು ಸಲಹೆ ಕೊಟ್ಟರಂತೆನೀನು ನರಸೀಪುರದ ಔಷಧಿಯನ್ನು ಯಾಕೆ ಒಮ್ಮೆ ಪ್ರಯತ್ನಿಸಬಾರದು?
ಲಕ್ಷ್ಮೀನಾರಾಯಣರಿಗೆ ಯಾವ ಔಷಧಿಯಾದರೇನು ತನ್ನ ಸರ್ವಸ್ವವಾದ ಪತ್ನಿಯನ್ನು ಉಳಿಸಿಕೊಂಡರೆ ಸಾಕು ಎನ್ನುತ್ತಾ ಔಷಧಿಯನ್ನು ತರಲು ವ್ಯವಸ್ಥೆ ಮಾಡಿದರು. ವಿಷಯ ತಿಳಿದ ನಾರಾಯಣ ಮೂರ್ತಿಯವರಿಗೂ ಇದೊಂದು ಹೊಸಾ ಖಾಯಿಲೆಯ ತರ ಕಂಡಿತಂತೆ. ಡಾಕ್ಟರ ವರದಿಗಳಲ್ಲೂ ಸ್ಪಷ್ಟನೆ ಇಲ್ಲಏನೆಂತ ಔಷಧ ಕೊಡುವುದುಆದರೂ ಬಹಳ ಧೀರ್ಘವಾಗಿ ಯೋಚಿಸಿಹೊಸದೊಂದು ಫಾರ್ಮುಲಾ ತಯಾರಿಸಿಅವತ್ತೇ ಮೊದಲು ಔಷಧಿಯನ್ನು ಕೊಟ್ಟರಂತೆ. ಅದೇನಾಶ್ಚರ್ಯ! ಎರೆಡುಮೂರು ದಿನಗಳಲ್ಲೇ ಚೇತರಿಕೆ ಕಂಡಿತು. ನಿಧಾನವಾಗಿ ಹೊಟ್ಟೆ ಕರಗತೊಡಗಿತು. ಆದರೆ ದಿನನಿತ್ಯ ರಕ್ತಕೀವುಕೆಟ್ಟವಾಸನೆ ನಿರಂತರವಾಗಿ ಹರಿಯುತ್ತಿತ್ತಂತೆ. ಕೆಲವು ದಿನಗಳಾದ ಮೇಲೆ ಗೆಡ್ಡೆಯೊಂದು ಹೊರಬಂದಿತು. ಅದು ಬರೋಬ್ಬರಿ 3 ಕೆಜಿ ಭಾರವಿತ್ತಂತೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಗಂಗಕ್ಕ ಮೊದಲಿನಂತೆ ಆಗಿಬಿಟ್ಟಳಂತೆ. ನನಗೆಹತ್ತಿರದಿಂದ ಪರಿಚಯ ಇರುವ ದಂಪತಿ ಹೇಳಿದ ಕಥೆಯನ್ನು ಕೇಳುವಾಗ ಆಶ್ಚರ್ಯದಿಂದ ಮಾತೇ ಹೊರಡಲಿಲ್ಲ. ಗೆಡ್ಡೆ ಹೊರಬಂದ ಮರುದಿನವೇ ಎಲ್ಲೆಲ್ಲೂ ಸುದ್ದಿಯಾಯಿತು.

ಶವಯಾತ್ರೆಗೆ ಹೊರಡಬೇಕಾಗಿದ್ದ ಗಂಗಮ್ಮ ಮತ್ತೆ ಎದ್ದು ಕುಳಿತಿದ್ದಾಳಂತೆ!

ಸುದ್ದಿ ಕೇಳಿದ ಸುತ್ತಮುತ್ತಲಿನವರಷ್ಟೇ ಅಲ್ಲಅನೇಕ ಡಾಕ್ಟರಿಗೂ ಆಶ್ಚರ್ಯವಾಯಿತಂತೆ. ಮರುದಿನದಿಂದಲೇ ರಾಶಿರಾಶಿ ಜನ ಕೌತುಕವನ್ನು ನೋಡಲು ಬಂದಿದ್ದರಂತೆ. ಒಂದು ದಿನ ಡಾಕ್ಟರರ ತಂಡವೊಂದು ಬಸ್ಸುಮಾಡಿಕೊಂಡು ಬಂದು ಪರೀಕ್ಷಿಸಿತಮ್ಮ ಸರ್ವೀಸಿನಲ್ಲೇ ಇಂಥಹಾ ಕೇಸನ್ನು ನೋಡಿರಲಿಲ್ಲ ಎನ್ನುತ್ತಾ ಫೋಟೋ ತೆಗೆದು ವರದಿ ಬರೆದುಕೊಂಡು ಹೋದರಂತೆ. ಈಗ ನೀವು ಗಂಗಕ್ಕಳನ್ನುಅವರು ಮಾಡುವ ಬಿಡುವಿಲ್ಲದ ಶ್ರಮದ ಕೆಲಸಗಳನ್ನು ನೋಡಿದರೆ ನಂಬುವುದಕ್ಕೆ ಆಗದು.

ಹಾಗಾದರೆ ಗಂಗಕ್ಕ ಮತ್ತೆ ಎದ್ದು ಕುಳಿತುಕೊಂಡಿದ್ದು ಹೇಗೆ??

ಇಲ್ಲಿಯೇ ನಾರಾಯಣ ಮೂರ್ತಿಯವರ ಮಹತ್ವ ಇರುವುದು. ಗಂಗಕ್ಕ ಹುಷಾರಾಗಿದ್ದರ ಬಗ್ಗೆ ಮೂರ್ತಿಯವರಿಗೆ ನೆನಪು ಮಾಡಿದರೆ ಅವರು ಒಂದು ಬಾರಿ ನಕ್ಕುದೈವೇಚ್ಚೆಎನ್ನುತ್ತಾ ಸುಮ್ಮನಾಗಿಬಿಡುತ್ತಾರೆಅಂದರೆ ಅದರ ಬಗ್ಗೆ ಜಂಭ ಕೊಚ್ಚಿಕೊಳ್ಳ ಬಯಸುವುದಿಲ್ಲ. ಪ್ರಚಾರ ಬಯಸದ ನಾರಾಯಣ ಮೂರ್ತಿಯವರನ್ನು ನಾನು ಭೇಟಿಮಾಡಿನಿಮ್ಮ ಬಗ್ಗೆ ಬರೆಯುತ್ತೇನೆಎಂದಾಗ ಅವರು ಉತ್ಸಾಹ ತೋರುವುದು ಇರಲಿಅದಕ್ಕೆ ತಮ್ಮ ನಿರಾಸಕ್ತಿಯನ್ನು ತೋರಿಬಹುಶಃ ಹೇಗೂ ಬರುವುದಿಲ್ಲ ಅಂದುಕೊಂಡುನಾಳೆಬರಲು ಹೇಳಿದರಂತೆ. ಆದರೆ ನಾನು ಬಿಡಬೇಕಲ್ಲಮರುದಿನವೇ ಮತ್ತೆ ಮಾತನಾಡಲು ಹೋದೆ.

ನಾರಾಯಣಮೂರ್ತಿಯವರದು ಒಂದು ನಿಯಮವಿದೆವಾರಕ್ಕೆ ಎರೆಡು ದಿನ ಮಾತ್ರ ಔಷಧಿಯನ್ನು ಕೊಡುವುದು. ಭಾನುವಾರ ಮತ್ತು ಗುರುವಾರ (ಈಗ ಜನರ ಒತ್ತಡ ತಡೆಯಲಾರದೆ ನಿಯಮವನ್ನು ಸ್ವಲ್ಪ ಸಡಿಲಿಸಿ ಶನಿವಾರ ಮಧ್ಯಾನ್ಹ ಕೂಡಾ ಕೊಡುತ್ತಾರೆ). ಎರೆಡೂ ದಿನವೂ ಮುನ್ನೂರು-ನಾನ್ನೂರು ಜನ ಸಾಲುಗಟ್ಟಿ ನಿಲ್ಲುತ್ತಾರೆ. ಇವರೆಲ್ಲಾ ಅಲ್ಲೇ ಹತ್ತಿರದ ಶಿವಮೊಗ್ಗಸಾಗರ ಪ್ರಾಂತ್ಯದಿಂದ ಬಂದವರಲ್ಲ. ಇವರಲ್ಲಿ ನೂರಕ್ಕೆ ತೊಂಬತ್ತು ಜನ  ಮಹಾರಾಷ್ಟ್ರತಮಿಳುನಾಡುಆಂಧ್ರತೆಲಂಗಾಣಗುಜರಾತ್ಎಲ್ಲೆಲ್ಲಿಂದಲೋ ಬಂದವರು. ರಾಜಾಸ್ಥಾನ್ ಮತ್ತು ಒರಿಸ್ಸಾದಿಂದಲೂ ಬಂದವರಿದ್ದಾರೆ.
ವಿಚಿತ್ರವೆಂದರೆ ನಾರಾಯಣ ಮೂರ್ತಿಯವರು ಔಷಧ ಕೊಡುತ್ತೇನೆಂದು ಎಲ್ಲಿಯೂ ಪ್ರಚಾರ ಮಾಡುವುದಿಲ್ಲ. ಮನೆಯ ಮುಂದೆ ಒಂದು ಸಣ್ಣ ಬೋರ್ಡ್ ಕೂಡಾ ಹಾಕಿಲ್ಲ. ಯಾರಾದರೂ ಫೋಟೋ ಹೊಡೆದುವಿಡಿಯೋ ಮಾಡಿ ಪ್ರಚಾರ ಮಾಡುತ್ತೇನೆ ಅಂದರೆಖಂಡಿತವಾಗಿಯೂ ಬೇಡ ಅನ್ನುತ್ತಾರೆ.

ನಾನು ಮೊದಲ ದಿನ ಹೋಗಿದ್ದು ಭಾನುವಾರದಂದು. ಅಂದು ಬಹಳಷ್ಟು ಜನ ಬಂದಿದ್ದರುನಾನು ಹೊರಡುವ (ಮಧ್ಯಾನ್ಹದ) ವೇಳೆಗೂ ಹೊಸ ಹೊಸ ಜನರು ಬರುತ್ತಲೇ ಇದ್ದರು. ನೂರಾರು ಕಾರುಜೀಪುಬೈಕುಗಳಿಗೆ ಪಾರ್ಕಿಂಗ್ ಸ್ಥಳದಲ್ಲಿ ಜಾಗ ಸಾಲದೆ ಇಕ್ಕಟ್ಟಿನ ರಸ್ತೆಯಮೇಲೇ ಸಾಲಾಗಿ ನಿಲ್ಲಿಸಿದ್ದರು. ಎರೆಡು ದಿನಗಳಲ್ಲಿ ಅವರ ಮನೆಮುಂದೆ ಬೆಳಿಗ್ಗೆ ಆರರಿಂದಲೇ ಸರತಿಸಾಲು ಶುರುವಾಗುತ್ತದೆ. ಇದರಲ್ಲಿ ಮುಸ್ಲಿಮರುಕ್ರಿಶ್ಚಿಯನ್ನರು ಕೂಡಾ ಒಳಗೊಂಡಿರುತ್ತಾರೆ. ಯಾವ್ಯಾವುದೋ ಭಾಷೆಯನ್ನು ಮಾತಾಡುವವರು ಬಂದರೆಹೊರಗೆಲ್ಲೂ ಹೆಚ್ಚು ಓಡಾಡದ ನಾರಾಯಣ ಮೂರ್ತಣ್ಣಅವರೊಂದಿಗೆ ಹೇಗೆ ಮಾತನಾಡುತ್ತಾರೆವ್ಯವಹರಿಸುತ್ತಾರೆ ಎಂಬ ಕುತೂಹಲ ನನಗೆ ಇತ್ತು. ಸರತಿ ಸಾಲಲ್ಲಿ ಇದ್ದವರನ್ನು ಮಾತನಾಡಿಸಿದೆ. ಅವರಲ್ಲಿ ಕೆಲವರು ಖಾಯಿಲೆಗಳಲ್ಯಾಬ್ ರಿಪೋರ್ಟ್ ಗಳಡಾಕ್ಟರ್ ಸಲಹೆಗಳ ಕನ್ನಡ ಅನುವಾದಗಳನ್ನೂ (Google Translation) ತಂದಿದ್ದರು! ಕೆಲವರು ದುಭಾಷಿಗಳನ್ನು ಕರೆತಂದಿದ್ದರು. ಇಷ್ಟು ಕಷ್ಟಪಟ್ಟುಖರ್ಚುಮಾಡಿಕೊಂಡು ಲಾಡ್ಜ್ ಗಳಲ್ಲಿ ಹಿಂದಿನ ದಿನವೇ ಬಂದಿಳಿದು,  ದೂರದಿಂದ ಬಂದು ಕ್ಯೂನಲ್ಲಿ ನಿಂತಿರುತ್ತಾರೆಂದರೆ ನಾಟೀ ವೈದ್ಯರ ಮೇಲೆ ಅದೆಷ್ಟು ವಿಶ್ವಾಸವಿರಬಹುದೋ...?

ನಾರಾಯಣ ಮೂರ್ತಿಯವರು ಹುಟ್ಟಿ ಬೆಳೆದಿದ್ದು ಇದೇ ನರಸೀಪುರದಲ್ಲಿ. ತಂದೆ ಸುಬ್ಬರಾವ್ತಾಯಿ ಭವಾನಮ್ಮ ಇವರ ಮಗನಾಗಿ 1941ರಲ್ಲಿ ಜನ್ಮತಾಳಿದರು. ಇವರ ಪತ್ನಿ ಅನ್ನಪೂರ್ಣಮ್ಮ. ನಾಲ್ಕು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ತುಂಬು ಸಂಸಾರ ಇವರದು. ಎಲ್ಲರನ್ನೂ ಮದುವೆ ಮಾಡಿ ದಡ ಸೇರಿಸಿರುವ ಇವರಿಗೆ ಈಗ ಮಗಸೊಸೆ ಮತ್ತು ಪತ್ನಿ ಎಲ್ಲಾ ಕಾರ್ಯಗಳಲ್ಲೂ ಸಹಾಯ ಮಾಡುತ್ತಾರೆ. ನಿರಂತರವಾಗಿ ಬರುವ ಜನರನ್ನು ನಿಯಂತ್ರಿಸಲೆಂದೇ ನಾಲ್ಕೈದು ಜನರನ್ನು ನೇಮಿಸಿಕೊಂಡಿದ್ದಾರೆ. ಜನರ ಅನುಕೂಲಕ್ಕಾಗಿಯೇ ಮನೆಯ ಅಂಗಳದಲ್ಲಿ ದೊಡ್ಡ ಚಪ್ಪರಹಾಕಿಸಿನಿಂತುಕೊಳ್ಳಲುಕುಳಿತುಕೊಳ್ಳಲುಕುಡಿಯುವ ನೀರುಶೌಚಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆ.

ವಿವರವಾಗಿ ಮಾತನಾಡುವಾಗ ಅವರು ಅನೇಕ ಉದಾಹರಣೆಗಳನ್ನು ಕೊಟ್ಟರು. ಅದರಲ್ಲಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಸಾಗರದ ಹತ್ತಿರ ಒಂದು ಹಳ್ಳಿಯಲ್ಲಿ ಒಬ್ಬರು ಹೊಟ್ಟೆನೋವಿನ ಖಾಯಿಲೆಯಿಂದ ನರಳುತ್ತಿದ್ದರು. ಏನು ತಿಂದರೂ ಅಜೀರ್ಣವಾಗುತ್ತಿತ್ತು.  ತಕ್ಷಣ ಅವರನ್ನು ಸಾಗರದ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಪ್ರಯೋಜನವಾಗಲಿಲ್ಲ. ನಂತರ ಶಿವಮೊಗ್ಗಕ್ಕೆ ಹೋದರು. ಆನಂತರ ಬೆಂಗಳೂರಿಗೆ ಹೋಗಿ ಹೆಸರಾಂತ ಡಾಕ್ಟರುಗಳನ್ನು ಭೇಟಿಮಾಡಿದರುಆಸ್ಪತ್ರೆಗೆ ದಾಖಲಾದರು. ಡಾಕ್ಟರು ವಿವಿಧ ಪರೀಕ್ಷೆ ಮಾಡಿಇದು ಇಲ್ಲೆಲ್ಲೂ ಆಗುವುದಿಲ್ಲಸಿಂಗಾಪುರಕ್ಕೆ ಹೋಗಿಅಲ್ಲಿ ಸರಿಯಾದ ಚಿಕಿತ್ಸೆ ದೊರೆಯಬಹುದು ಎಂಬ ಭರವಸೆ ಇತ್ತು ಕಳುಹಿಸಿದರು. ಆದರೆ ಅಲ್ಲಿಯೂ ಕೆಲವು ದಿನಗಳು ಆಸ್ಪತ್ರೆಗೆ ದಾಖಲಾಗಿದ್ದುಪ್ರಯೋಜನವಾಗದೆ ನರಳುತ್ತಾ ಮನೆಗೆ ಬಂದರು. ಅದುವರೆಗೆ ಸುಮಾರು ಇಪ್ಪತ್ತು ಲಕ್ಷರೂಪಾಯಿಗಳನ್ನು ಖರ್ಚು ಮಾಡಿದ್ದರು. ಇವರಿಗೆ ಧೂಮಪಾನದ ಹವ್ಯಾಸವಿದ್ದದ್ದರಿಂದ ದೇಹ ಜರ್ಝರಿತವಾಗಿತ್ತು. ಜೀರ್ಣಾಂಗವೊಂದರಲ್ಲಿ ದೊಡ್ಡ ತೂತು ಆಗಿತ್ತು. ಅದನ್ನು ಆಪರೇಷನ್ ಮಾಡಿ ಮುಚ್ಚಲು ಇವರ ವಯಸ್ಸು ಮತ್ತು ಸಕ್ಕರೆ ಖಾಯಿಲೆ ಅನುವುಮಾಡಿಕೊಡಲಿಲ್ಲ. ಹಾಗಾಗಿ ಸೇವಿಸಿದ್ದೆಲ್ಲವೂ ಜೀರ್ಣಕ್ರಿಯೆಗೆ ಒಳಪಡದೇ ಹೊಟ್ಟೆಯೊಳಗೇ ಚೆಲ್ಲಿ ಅನಾರೋಗ್ಯ ಉಲ್ಬಣಗೊಂಡಿತ್ತು.
 ಇನ್ನೇನು ಕೊನೆಯದಿನಗಳು ಹತ್ತಿರ ಬಂದವು ಎನ್ನುತ್ತಾ ಒಮ್ಮೆ ವರದಹಳ್ಳಿಗೆ ಹೋಗಿ ಭಗವಾನ್ ಶ್ರೀಧರ ಸ್ವಾಮಿಗೆ ನಮಸ್ಕರಿಸಿ ಬರೋಣವೆಂದು ಹೋದರಂತೆ. ಅಲ್ಲಿ ಕಣ್ಣುಮುಚ್ಚಿ ನಮಸ್ಕಾರ ಮಾಡುವಾಗ ಯಾರೋ ಹೇಳಿದಹಾಗಾಯಿತು, "ನೀನು ನರಸೀಪುರದ ಔಷಧ ತೆಗೆದುಕೋಒಳ್ಳೆಯದಾಗುತ್ತದೆ" ಎಂದು. ಕಣ್ಣುಬಿಟ್ಟು ಸುತ್ತಮುತ್ತ ನೋಡಿದಾಗ ಯಾರೂ ಕಾಣಲಿಲ್ಲ. ಅರೆಯಾರೂ ಇಲ್ಲ ಅಂದಮೇಲೆಇದು ಸಾಕ್ಷಾತ್ ಶ್ರೀಧರರ ಆಜ್ಞೆಯೇ ಇರಬೇಕೆಂದು ತಿಳಿದು ಪತ್ನಿಗೆ ವಿಷಯ ತಿಳಿಸಿನರಸೀಪುರದ ಔಷಧಿಗೆ ಹುಡುಕಿಕೊಂಡು ಬಂದರು. ನಾರಾಯಣಮೂರ್ತಿಯವರು ಎಲ್ಲವನ್ನೂ ಪರೀಕ್ಷಿಸಿ ಔಷಧಗಳ ಮಿಶ್ರಣವನ್ನು ಕೊಟ್ಟರು. ಅದೇನಾಶ್ಚರ್ಯಎರೆಡೇ ದಿನಗಳಲ್ಲಿ ಔಷಧ ಪರಿಣಾಮ ಬೀರಿತು. ಬಲುಬೇಗ ಜೀರ್ಣಾಂಗದ ತೂತು ಮುಚ್ಚಿಹೋಗಿಸೇವಿಸಿದ ಆಹಾರವೆಲ್ಲವೂ ಜೀರ್ಣವಾಗತೊಡಗಿತು. ದೇಹಕ್ಕೆ ಪುನಃ ಶಕ್ತಿಚೈತನ್ಯ ಬಂದಿತು. ರೋಗಿಯು ಎದ್ದು ಓಡಾಡಲು ಶುರುಮಾಡಿದರು. ಈಗ ಸುಮಾರು ಇಪ್ಪತ್ತು ವರ್ಷದ ಹಿಂದೆ ನಡೆದ ಪ್ರಹಸನಕ್ಕೆ ಇವರು ಜೀವಂತ ಸಾಕ್ಷಿ.

ನಾರಾಯಣ ಮೂರ್ತಿಯವರು ಓದಿದ್ದು ಬಹಳ ಕಡಿಮೆ. ಆದರೆ ರೋಗದ ಲಕ್ಷಣದೇಹದ ಸ್ವಾಸ್ಥ್ಯ ಹಾಗೂ ಸಸ್ಯ ಔಷಧಗಳ ಬಗ್ಗೆ ತಿಳಿದುಕೊಂಡಿದ್ದು ಬಹಳ ಹೆಚ್ಚು. ನಾರಾಯಣ ಮೂರ್ತಿಯವರಿಗೆ ಸಾಗರ ತಾಲ್ಲೂಕುಗಾಲಿ ನಾರಾಯಣಪ್ಪನವರಿಂದ ಔಷಧ ಜ್ಞಾನದ ಉಪದೇಶವಾಯಿತು. ನಂತರ ಮೈಸೂರಿನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲೂ ಭಾಗವಹಿಸಿದ್ದಾರೆ. ಈಗ 78 ಹರೆಯದ ಇವರು 1969ರಿಂದಲೂ ಅಂದರೆ ಸುಮಾರು 47-48 ವರ್ಷಗಳಿಂದ ಔಷಧವನ್ನು ಕೊಡುತ್ತಿದ್ದಾರೆ. ಮೊದಮೊದಲು ನೆಂಟರುವಿಶ್ವಾಸಿಕರಿಗೆ ಔಷಧಕೊಟ್ಟು ಅವರ ಖಾಯಿಲೆಗಳು ಗುಣವಾದಮೇಲೆ ಇವರ ಹೆಸರು ತಾನಾಗಿಯೇ ಹಬ್ಬಿತು. ಚೆನ್ನೈಬೆಂಗಳೂರುಮುಂಬೈಹೈದರಾಬಾದಿನ ಅನೇಕ ಡಾಕ್ಟರುಗಳು ತಮಗೆ ಕಷ್ಟವಾಗುವ ರೋಗಿಗಳಿಗೆ ಇವರ ವಿಷಯವನ್ನು ತಿಳಿಸುತ್ತಾರೆ.
ಯಾವ ಯಾವ ಖಾಯಿಲೆಗೆ ಔಷಧ ಕೊಡುತ್ತೀರಿ ಎಂಬ ನನ್ನ ಪ್ರಶ್ನೆಗೆದೇಹದ ಮತ್ತು ರೋಗದ ಲಕ್ಷಣಗಳನ್ನು ಪರಿಶೀಲಿಸಿ ಔಷಧವನ್ನು ಕೊಡುತ್ತೇನೆಕೆಲವೊಮ್ಮೆ ಯಾವುದೋ ಹೊಸಾ ಖಾಯಿಲೆ ಇರುವಾಗ ಹೆಸರು ಏನೆಂದು ಕರೆಯುವುದುಎಂದು ಮಾರ್ಮಿಕವಾಗಿ ವಿವರಿಸಿದರು. ಇವರು ಬಹುತೇಕ ಎಲ್ಲಾ  ಪ್ರಮುಖ ಖಾಯಿಲೆಗಳಿಗೂ ಔಷಧವನ್ನು ಕೊಡುತ್ತಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆದರೂ ಹೆಚ್ಚು ಜನ ಬರುವವರು ಕ್ಯಾನ್ಸರ್ ರೋಗಿಗಳು. 2015-16 ವರೆಗೂ ಮರದ ಚಕ್ಕೆಸೊಪ್ಪುಗಳಿಂದ ಔಷಧ ಕೊಡುತ್ತಿದ್ದರು. ಅಲ್ಲಿಂದ ಮುಂದೆ ಚಕ್ಕೆಗಳ ಸಂಗ್ರಹಕ್ಕೆ ತೊಡಕುಂಟಾಗಿವಿವಿಧಕಡೆಗಳಿಂದ  ಚಕ್ಕೆಯ ಪುಡಿಗಳನ್ನು ತರಿಸಿಅವಶ್ಯಕತೆಗೆ ತಕ್ಕ ಮಿಶ್ರಣ ಮಾಡಿ ರೋಗಿಗಳಿಗೆ ವಿತರಿಸುತ್ತಾರೆ.  ರೋಗಿಗಳ ಮುಂದೆಯೂ ಯಾವ ಆಡಂಬರವಿಲ್ಲದೇಬಿಳೀ ಪಂಚೆಬನಿಯನ್ ತೊಟ್ಟುಅತ್ಯಂತ ಗ್ರಾಮ್ಯ ಸ್ಥಿತಿಯಲ್ಲೇ ಮಾತನಾಡಿಸಿ ಔಷಧಕೊಟ್ಟು ಉಪಚರಿಸುತ್ತಾರೆ. ಹಾಗಾಗಿ ಇವರನ್ನು ಬಾಹ್ಯದಿಂದ ನೋಡಿದರೆ ಅಂತಹಾ ಅದ್ಭುತ ಮನುಷ್ಯ ಎಂದು ಅನಿಸಲಾರದು!
ಆದರೆ ಕೈಗಳಲ್ಲಿ ಅದೇನು ಶಕ್ತಿಯೋಔಷಧಗಳಲ್ಲಿ ಅದೇನು ರಹಸ್ಯವೋಹಾರೈಕೆಯಲ್ಲಿ ಅದೇನು ದೈವ ಮಹಿಮೆಯೋ ಯಾವುದೂ ಅರ್ಥವಾಗದು. ಇವರು ಶ್ರೀಧರ ಸ್ವಾಮಿಗಳ ಪರಮ ಭಕ್ತರಾಗಿದ್ದು ಅನುಗ್ರಹದ ಮಹಿಮೆಯೇ ಇವರ ಶಕ್ತಿ ಇರಬಹುದು ಎಂದು ಕೆಲವರ ವ್ಯಾಖ್ಯಾನ.

ಊರೆಂದಮೇಲೆ ಹೊಟ್ಟೆಕಿಚ್ಚು ಪಡುವವರುಕಾಲೆಳೆಯುವವರುಕೊಕ್ಕೆ ಹಾಕುವವರುಕಿರುಕುಳಕೊಡುವವರು ಇರುವುದು ಸಹಜ. ನಾರಾಯಣ ಮೂರ್ತಿಯವರ ವೃತ್ತಿ ಬದುಕಿನಲ್ಲಿಯೂ ಅವರ ಅಭ್ಯುದಯವನ್ನು ನೋಡಿ ಸಹಿಸಲಾಗದ ಕೆಲವು ಸುತ್ತ ಮುತ್ತಲ ಜನರುಇತ್ತೀಚೆಗೆ ಇವರ ಹೆಸರಿಗೆ ಮಸಿಬಳಿಯಲೆಂದೇ ನಕಲಿ ವಿಡಿಯೊಗಳನ್ನು ಸೃಷ್ಠಿಸಿ ಜನರಿಗೆ ಸೋಷಿಯಲ್ ಮೀಡಿಯಾಗಳ ಮೂಲಕ ಹರಿಯಬಿಟ್ಟು ವೃತ್ತಿಗೆ ಘಾಸಿ ಮಾಡಲು ಪ್ರಯತ್ನಿಸಿದರು. ಸ್ಥಳೀಯ ಆಡಳಿತಕ್ಕೆ ವಿನಾಕಾರಣಸಾವಿರಾರು ಮರಗಳನ್ನು ಕಡಿದು ಕಾಡನ್ನು ನಾಶಮಾಡಿದ್ದಾರೆಎಂಬ ದೂರುನೀಡಿಕೋರ್ಟ್ ಮೆಟ್ಟಿಲು ಏರಿದರು. ಆದರೆ ಇವೆಲ್ಲವೂ ಸತ್ಯದ ಮುಂದೆ ನಿಲ್ಲಲಾರದೇ ಹೋಯಿತು. ಕಾಡನ್ನು ನಾಶ ಮಾಡಿದ್ದರಲ್ಲಿ ಇವರ ಪಾತ್ರವಿಲ್ಲ ಎಂದು ಚೆನ್ನೈನ ಗ್ರೀನ್ ಟ್ರಿಬ್ಯುನಲ್ ಇವರ ಪರವಾಗೇ ತೀರ್ಪು ನೀಡಿತು. ಅದಾದನಂತರ ಈಗ ಇನ್ನೂ ಹೆಚ್ಚು ಜನ ಬರುತ್ತಿದ್ದಾರೆ. ಇಷ್ಟಾದರೂ ಇವರು ರೋಗಿಗಳಿಂದ ತೆಗೆದುಕೊಳ್ಳುವುದು 400-500 ರೂಪಾಯಿಗಳನ್ನು ಮಾತ್ರ. ಇವರು ವಿದೇಶದಿಂದ ತರಿಸುವ ಚಕ್ಕೆಯ ಪುಡಿಗೆಅಲ್ಲಿಯ ಬೆಲೆಡಾಲರ್ ವಿನಿಮಯದ ಖರ್ಚುಅಲ್ಲಿಯ ತಜ್ಞರಿಗೆ ಖರ್ಚುಸಾಗಾಣಿಕೆ ಖರ್ಚು ಇದನ್ನೆಲ್ಲಾ ಸೇರಿಸಿದರೆ ಇವರು ತೆಗೆದುಕೊಳ್ಳುವ ಹಣ ಎಲ್ಲಿಯವರೆಗೆ ಎಂಬುದು ನಿಮ್ಮ ಅಂದಾಜಿಗೆ ಸಿಗಬಹುದಾದ ಲೆಕ್ಕ ಎಂದು ವಿವರಿಸುತ್ತಾರೆ.

ಹೀಗಿದ್ದರೂನಾರಾಯಣಮೂರ್ತಿಯವರಲ್ಲಿ ಹೋದವರೆಲ್ಲರೂ ಗುಣವಾಗುತ್ತಾರೆ ಎಂದು ನಾನು ಹೇಳುತ್ತಿಲ್ಲ. ನಾನಿರಲಿಸ್ವತಃ ಮೂರ್ತಿಯವರೂ ಹೇಳುವುದಿಲ್ಲಎಲ್ಲಿಯೂ 100% ಯಶಸ್ವಿಯಾದ ವೈದ್ಯರನ್ನು ನಾವು ನೋಡಿಲ್ಲ. ಆಮೇಲೆಯಾವುದೇ ವೃತ್ತಿಜೀವನದಲ್ಲಿ ಕೆಲವು ಸಲ ಹಿನ್ನಡೆಯಾಗುತ್ತದೆ. ಇದು ಯಾವ ವೃತ್ತಿವಂತರಿಗೂ ತಪ್ಪಿದ್ದಲ್ಲ. ಹಾಗಂತ ನಾವು ಒಬ್ಬಿಬ್ಬರು ಹೇಳಿದರು ಅಂದ ಮಾತ್ರಕ್ಕೆ ಇಂಥವರನ್ನು ತೆಗೆಳಬೇಕಾಗಿಲ್ಲ ಅಥವಾ ನಾಲ್ಕು ಜನ ಹೇಳಿದರು ಅಂದ ಮಾತ್ರಕ್ಕೆ ಹೊಗಳಬೇಕಾಗಿಯೂ ಇಲ್ಲ. ಹಾಗೆಯೇ ಗಾಳಿಸುದ್ದಿಗಳನ್ನು ಕೇಳಿಕೊಂಡು ಇಲ್ಲಸಲ್ಲದ ಆರೋಪ ಮಾಡುವುದೂ ತಪ್ಪು. ಇವತ್ತುಕಣ್ಣಾರೆ ಕಂಡರೂ ಪರಾಂಬರಿಸಿ ನೋಡುಎನ್ನುವಂತಹಾ ಕಾಲ. ಹಾಗಾಗಿ ಅನುಮಾನ ಇರುವವರು ಸ್ವತಹ ಪರೀಕ್ಷಿಸಿಯೇ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು. ’ಹಂಸ-ಕ್ಷೀರ ನ್ಯಾಯದಂತೆ ಇಲ್ಲಿ ಕ್ಷೀರವೊಂದೇ ಪ್ರಸ್ತುತವಾಗುತ್ತದೆ.

ಇಲ್ಲಿ ಇನ್ನೊಂದು ಮುಖ್ಯವಾದ ವಿಷಯವೆಂದರೆನಾರಾಯಣ ಮೂರ್ತಿಯವರ ಸುತ್ತ ಮುತ್ತ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷವಾದ ಅವಲಂಬಿತರಿದ್ದಾರೆ (Dependents). ಸಾಗರಶಿವಮೊಗ್ಗಆನಂದಪುರ ಅಥವಾ ಇನ್ನೂ ದೂರ ದೂರದ ಪ್ರದೇಶದಿಂದ ರೋಗಿಗಳನ್ನು ಕರೆತರುವ ದೊಡ್ಡ ಸಾರಿಗೆ ವ್ಯವಸ್ಥೆಯೇ ಇದೆ. ಆಟೋದವರುಬಸ್ಸುಕಾರುಜೀಪುಮೋಟಾರ್ ಸೈಕಲ್ಲಿನವರು ಕೂಡಾ ಇಲ್ಲಿ ಬರುವ ರೋಗಿಗಳ ಸಾಗಾಟದಿಂದ ಸಮೃದ್ಧಿಯಿಂದ ಜೀವನ ಸಾಗಿಸುತ್ತಾರೆ. ಮೂರ್ತಿಯವರಿಂದಾಗಿ ಪ್ರವಾಸಿ/ಹೋಟೆಲ್ ಉದ್ಯಮ ಬೆಳೆದಿದೆ. ಕೈಗಾಡಿಪೆಟ್ಟಿಗೆ ಅಂಗಡಿಯಲ್ಲಿ ತಿಂಡಿ/ಊಟ ಮಾರುವವರು ಕೂಡಾ ಹೆಚ್ಚು ಕಷ್ಟವಿಲ್ಲದೇ ನಾಲ್ಕು ಕಾಸು ಸಂಪಾದಿಸುತ್ತಾರೆ. ಪೋಸ್ಟ್ ಮತ್ತು ಕೊರಿಯರ್ ಉದ್ಯಮ ಕೂಡಾ ಲಾಭ ಪಡೆದಿವೆ. ನೇರವಾಗಿಯೇ ನಾಲ್ಕೈದು ಕೆಲಸಗಾರರನ್ನು ನೇಮಿಸಿಕೊಂಡಿದ್ದಾರೆ. ಒಂದು ಊರು ಅಭಿವೃದ್ಧಿ ಹೊಂದಲು ಇವೆಲ್ಲಾ ಅಂಶಗಳೂ ಪೂರಕವಾಗಿರುತ್ತದೆ. ಇವೆಲ್ಲಾ ನಾರಾಯಣಮೂರ್ತಿಯವರ ಕಾಯಕವಿಲ್ಲದೇ ಆಗುತ್ತಿತ್ತೇ...?

ನಾರಾಯಣ ಮೂರ್ತಿಯವರ ಸಮಾಜ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಪ್ರಶಂಸೆಪ್ರಶಸ್ತಿ-ಪುರಸ್ಕಾರಗಳನ್ನು ನೀಡಿವೆ.
ಅವುಗಳಲ್ಲಿ ಪ್ರಮುಖವಾಗಿಸಿದ್ಧಗಂಗಾ ಮಠದಿಂದವೈದ್ಯರತ್ನಧರ್ಮಸ್ಥಳದ ಪೀಠದಿಂದ ವೈದ್ಯಸಿರಿರಾಮಚಂದ್ರಾಪುರ ಮಠದಿಂದ ನಾಟಿವೈದ್ಯಆರ್ಟ್ ಆಫ್ ಲಿವಿಂಗ್ ನಿಂದ ಸನ್ಮಾನಚಿತ್ರದುರ್ಗದ ಮರುಘಾ ಮಠದಿಂದ ಸನ್ಮಾನಶ್ರೀ ಅಖಿಲ ಹವ್ಯಕಮಹಾಸಭಾದಿಂದ ಪ್ರತಿಭಾ ಪುರಸ್ಕಾರಪುತ್ತೂರು ಹವ್ಯಕ ಸಭಾದಿಂದ ಸನ್ಮಾನಲಯನ್ಸ್ ಕ್ಲಬ್ ಸಿದ್ದಾಪುರದಿಂದ ಸನ್ಮಾನಶಿವಮೊಗ್ಗದ ಹವ್ಯಕ ಸಂಘವಿಪ್ರ ಟ್ರಸ್ಟ್ ದಿಂದ ಆಯುರ್ವೇದ ಧನ್ವಂತರೀ ಅಭಿನಂದನಾ ಪತ್ರಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪುರಸ್ಕಾರಹೀಗೆ ಸುಮಾರು ನೂರಕ್ಕೂ ಹೆಚ್ಚು ಪುರಸ್ಕಾರಗಳು ಇವರಿಗೆ ಸಂದಿವೆ. ಇವರ ಮನೆಯಲ್ಲಿ ಶೋಕೇಸಿನಲ್ಲಿ ಜಾಗ ಸಾಕಾಗದೇ ನೆನಪಿನ ಕಾಣಿಕೆಗಳನ್ನು ಒಂದರ ಹಿಂದೆ ಒಂದುತುರುಕಿಇಟ್ಟಿದ್ದಾರೆಸೂಕ್ತ ಸ್ಥಳದ ಅಭಾವದಿಂದಾಗಿ!

ಇವರಿಗೆ ಕೊಡಮಾಡಿದ ಅನೇಕ ಪ್ರಶಸ್ತಿಗಳಲ್ಲಿ ಒಂದು ಪ್ರಶಂಸನಾ ಪತ್ರದ ಒಕ್ಕಣೆ ನನಗೆ ಬಹಳ ಇಷ್ಟವಾಯಿತುನಿಮಗೂ ಇಷ್ಟವಾಗಬಹುದು.
"ಅತ್ಯಂತ ಹಳೆಯ ಅವಿಚ್ಚಿನ್ನ ಜೀವಂತ ಪರಂಪರೆಗಳನ್ನು ಭಾರತದಲ್ಲಿ ನಾಟಿ ವೈದ್ಯರು ಪ್ರತಿನಿಧಿಸುತ್ತಾರೆ. ಪ್ರಾಚೀನ ಕಾಲದಾರಭ್ಯ ಇವರು ಗ್ರಾಮೀಣ ಸಮಾಜಗಳಿಗೆ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಆರೋಗ್ಯ ಪಾಲನೆಗೆ ಕೊಡುಗೆ ನೀಡುವುದನ್ನು ಮುಂದುವರೆಸುವ ನಾಟೀ ವೈದ್ಯರುಭಾರತದ ಜಾನಪದೀಯ ಆರೋಗ್ಯ ಪರಂಪರೆಗಳನ್ನು ಪ್ರಪಂಚದಲ್ಲೇ ಹೆಚ್ಚು ಶ್ರೀಮಂತದಾಯಕವಾಗಿರುವಂತೆ ಜೀವಂತವಾಗಿರಿಸುತ್ತಾರೆ".

ನಾರಾಯಣ ಮೂರ್ತಿಯವರು ತಮ್ಮ ವೃತ್ತಿಯ ಮಧ್ಯೆಮಧ್ಯೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಫೋನ್ ನಂಬರನ್ನು ಸಾಮಾನ್ಯವಾಗಿ ಯಾರಿಗೂ ಕೊಡುವುದಿಲ್ಲಹಾಗಾಗಿ ಅವರನ್ನು ಭೇಟಿಯಾಗಬೇಕೆಂದರೆ ನೇರವಾಗಿ ನರಸೀಪುರಕ್ಕೇ ಹೋಗಬೇಕು. ಶಿವಮೊಗ್ಗ ಅಥವಾ ಸಾಗರದಿಂದ ಹೊರಟರೆರಾಷ್ಟ್ರೀಯ ಹೆದ್ದಾರಿ 206ರಲ್ಲಿ ಆನಂದಪುರವೆಂಬ ಪಟ್ಟಣ ಸಿಗುತ್ತದೆ. ಅಲ್ಲಿಂದ ಸುಮಾರು 9 ಕಿಮೀ ದೂರದಲ್ಲಿದೆ ನರಸೀಪುರ. ಅಲ್ಲಿಗೆ ಬಸ್ಸಿನ ಸೌಲಭ್ಯಆಟೋರಿಕ್ಷಾ ಅಥವಾ ಟ್ಯಾಕ್ಸಿಗಳು ಆನಂದಪುರದಿಂದಲೂ ಲಭ್ಯವಿದೆ.

---------------------------------------------------------------------