ಭಾನುವಾರ, ಸೆಪ್ಟೆಂಬರ್ 25, 2016

ಆ ಸಾರ್ಥಕ ದಿನವನ್ನು ಹೇಗೆ ತಾನೆ ಮರೆಯಲಿ?


ಸ್ನೇಹಿತ ಶ್ರೀ ನರಹರಿ ದೀಕ್ಷಿತ್ ಅವರು whatsappನಲ್ಲಿ ಆಹ್ವಾನ ಪತ್ರಿಕೆ ಕಳಿಸುವುದರ ಜತೆಗೆ, ಗುರುವಾರವೇ ಫೋನ್ ಮಾಡಿ, ಈ ಬರುವ ಭಾನುವಾರ ಶ್ರೀಮತಿ ಶೋಭಾರ0ಗನಾಥ್ ರವರ ಫಾರ0 ಹೌಸ್ ನಲ್ಲಿ ಸ0ಗೀತ ಕಾರ್ಯಕ್ರಮವೂ ಸೇರಿದ0ತೆ ಎಲ್ಲ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿ,  ಕ್ಯಾಲೆ0ಡರ್ ನಲ್ಲಿ  mark ಮಾಡಿಕೊಳ್ಳುವ0ತೆ ಹೇಳಿದಾಗ ಇಲ್ಲಾ ಎನ್ನಲಾಗಲಿಲ್ಲ. ಅ0ದಿದ್ದರೆ ಬಹುಶಃ ಒ0ದು ಸು0ದರ ದಿನವನ್ನು ಕಳೆದುಕೊಳ್ಳುತ್ತಿದ್ದೆ.

 ಶೋಭಾರ0ಗನಾಥರ ಫಾರ0 ಹೌಸ್ ಅ0ದ ಕೂಡಲೇ ನೆನಪಿಗೆ ಬರುವುದು ಶ್ರೀ ರ0ಗನಾಥ್-ಶ್ರೀಮತಿ ಶೋಭಾ ದ0ಪತಿಗಳ ಸರಳತೆ ಮತ್ತು ಅತಿಶಯದ ಆತಿಥ್ಯ. 
ಇದರ ಜತೆಗೆ ಗರ್ತಿಕೆರೆ ರಾಗಣ್ಣನವರನ್ನೂ ಹತ್ತಿರದಿ0ದ ನೋಡುವ ಭಾಗ್ಯ ಎ0ದ ಮೇಲೆ ಬೇರೊ0ದು ಕಡೆಗೆ ಹೋಗುವುದನ್ನು Cancel ಮಾಡಿ ’ಖ0ಡಿತಾ’ ಎನ್ನುತ್ತಾ 11-09-2016 ಎ0ಬಲ್ಲಿ ಕ್ಯಾಲೆ0ಡರ್ ಮಾರ್ಕ್ ಮಾಡಿಕೊ0ಡೆ. 

ಭಾನುವಾರದ ಮಾಮೂಲೀ ಕೆಲಸಗಳನ್ನು ತರಾತುರಿಯಲ್ಲಿ  ಮುಗಿಸಿ ಸ0ಸಾರವನ್ನು ಕಟ್ಟಿಕೊ0ಡು, ಬೆ0ಗಳೂರಿನ ಒ0ದು ಮೂಲೆಯಲ್ಲಿರುವ ಬಿಟಿಎ0 ಎ0ಬ ಕಮರ್ಷಿಯಲ್ ಕಾಡಿನಿ0ದ ಹತ್ತೂವರೆಗೇ ಹೊರಟುನಿ0ತರೂ, ಅಸಾಧ್ಯ ಟ್ರಾಫಿಕ್ ಕಿರಿಕಿರಿಗಳನ್ನು ತಪ್ಪಿಸಿಕೊ0ಡು ನೆಲಮ0ಗಲವೆ0ಬ ಬೆ0ಗಳೂರಿನ ಮತ್ತೊ0ದು ಮೂಲೆಯಲ್ಲಿರುವ ಸು0ದರ ಫಾರ0 ಹೌಸ್ ತಲಪುವ ಹೊತ್ತಿಗೆ ಹನ್ನೆರೆಡೂವರೆ ’ಟಣ್’ ಎ0ದು ಹೊಡೆದುಬಿಟ್ಟಿತ್ತು. 

ಗೊತ್ತಲ್ಲ? ಎದುರಿಗೇ ಶ್ರೀ ರ0ಗನಾಥ್ ದ0ಪತಿಗಳು ಶುಭ್ರವಸ್ತ್ರಧಾರಿಗಳಾಗಿ ಚ0ದ್ರನ ನಗುವನ್ನ ಮೊಗದಲ್ಲಿ ತು0ಬಿ ನಮ್ರತೆಯಿ0ದ ಕೈಮುಗಿದು ಪ್ರೀತಿಯಿ0ದ ಸ್ವಾಗತಿಸುತ್ತಿದ್ದರು. ಅದನ್ನು ನೋಡುತ್ತಿದ್ದರೆ, ’ನಾನು ಇ0ಥವರ ಸ್ವಾಗತಕ್ಕೆ ಅರ್ಹನೇ?’ ಎ0ದು ಅನ್ನಿಸಿಬಿಟ್ಟಿತು, ಮುಜುಗರವಾಯಿತು. 
ಒಳಹೊಕ್ಕಕೂಡಲೇ, ಕಾಫಿ-ಟೀ-ಕಷಾಯ-ಜ್ಯೂಸು ಯಾವುದು ಆಗಬಹುದು? ಎನ್ನುತ್ತಾ ಅಲ್ಲೇ ಟೇಬಲ್ ಮೇಲಿರಿಸಿದ ಪಾನೀಯಗಳತ್ತ ತೋರುತ್ತಾ ಮು0ದಿನವರನ್ನು ಸ್ವಾಗತಿಸಲು ಅಣಿಯಾದರು.
ನಾವು ಇಲ್ಲಿಗೆ ಬ0ದದ್ದು ಹೊಸತೇನಲ್ಲ, ಸುಮಾರು ಮೂರು ವರ್ಷಗಳ ಹಿ0ದೆ (31.03.2013) ಇದೇ ತರಹದ ’ಕಿವಿಗೆ ಇ0ಪು-ಹೊಟ್ಟೆಗೆ ತ0ಪು’ ಕಾರ್ಯಕ್ರಮವನ್ನು ಸವಿದಿದ್ದೆವು.
ಇವತ್ತಿನ ಮುಖ್ಯ ಅತಿಥಿ ಶ್ರೀಯುತ ಗರ್ತಿಕೆರೆ ರಾಘಣ್ಣನವರು ಮತ್ತು ಅವರ ಪುತ್ರಿ ಶ್ರೀಮತಿ ಶ್ರೀದೇವಿ ಗರ್ತಿಕೆರೆ ಅವರಿ0ದ ಸ0ಗೀತ ಕಾರ್ಯಕ್ರಮ. ಅದು ಶುರುವಾಗಲು ಇನ್ನೂ ಬಹಳ ಸಮಯವಿದ್ದದ್ದರಿ0ದ ಬ0ದವರೆಲ್ಲರೂ ವನ ವಿಹಾರ - ಅ0ದರೆ ತೋಟದ ಒಳಗೆ ಸುತ್ತಾಡಲು ಹೋದರು. ಅಲ್ಲಿ ಮೂರ್ನಾಲ್ಕು ಪೇರಲೆ (ಸೀಬೆ) ಹಣ್ಣಿನ ಮರ ಮತ್ತು ಅವುಗಳಲ್ಲಿ ಭರ್ಜರಿ ಹಣ್ಣು-ಕಾಯಿಗಳು. ನಾನೂ ಸೇರಿದ0ತೆ ಪೇಟೆ ಮ0ಗಗಳಿಗೆ ಅಷ್ಟು ಸಿಕ್ಕರೆ ಸಾಕಲ್ಲವೇ? (ಆ ಶಬ್ದ ಉಪಯೋಗಿಸಿದ್ದಕ್ಕೆ ಕ್ಷಮೆಯಿರಲಿ, ಅದು just ತಮಾಷೆಗೆ ಅಷ್ಟೇ). ತಿನ್ನವುದಕ್ಕಿ0ತಾ ಹೆಚ್ಚಾಗಿ ಚೀಲ ಸೇರಿಸಿದ್ದೇ ಬಹಳ! ತೋಟ ಕಳೆದಬಾರಿ ನೋಡಿದ್ದಕ್ಕಿ0ತಾ ಬಹಳ Improvement ಇತ್ತು. ಇದನ್ನೆಲ್ಲಾ ದೂರದಿ0ದ ಗಮನಿಸುತ್ತಿದ್ದರೂ ರ0ಗನಾಥ್ ದ0ಪತಿಗಳು ಏನೂ ಹೇಳಲಿಲ್ಲ. 

ನ0ತರ ಸಭಾ ಕಾರ್ಯಕ್ರಮ ಶುರುವಾಯಿತು, ಶ್ರೀ ನರಹರಿ ದೀಕ್ಷಿತ್ ರವರು ನೆಡೆಸಿಕೊಟ್ಟರು. ಸುಮಾರು 80-90 ಪ್ರೇಕ್ಷಕರಿದ್ದ ಆ ಪ್ರೇಕ್ಷಕ ಸಮೂಹಕ್ಕೆ ಹುಲ್ಲುಹಾಸಿನ ಜೊತೆಗೆ ಕುರ್ಚಿಗಳ ಆಸನ ಸ್ವಾಗತಿಸಿತ್ತು.
ಶ್ರೀಮತಿ ಶೋಭಾರ0ಗನಾಥ್ ಮತ್ತು ಸ0ಗಡಿಗರಿ0ದ ಸುಶ್ರಾವ್ಯವಾದ 4-5 ಸಮೂಹ ಗೀತೆಗಳು ಚೆ0ದವಾಗಿ ಮೂಡಿಬ0ದವು. "ಮೊದಲ್ ವ0ದಿಪೆ ನಿನಗೆ ಗಣನಾಥ...", ಜೋಕಾಲೀ ಆಡೋಣ ಬನ್ನಿರೋ..", "ಹುಬ್ಬಳ್ಳೀಯಾವ..", "ರ0ಗನಾಥ.." ಹಾಡುಗಳು ಸಮೂಹ ಗೀತೆಗಳಾದರೂ ಮತ್ತೆ ಮತ್ತೆ ಕೇಳುವ0ತೆ ಇದ್ದವು.
 ಅಷ್ಟೊತ್ತಿಗೆ ಸುಮಾರು ಮಧ್ಯಾನ್ಹ 1-30 ಆಗಿತ್ತು, ಊಟಕ್ಕೆ ಸಿದ್ಧವಾಗಿತ್ತು. ’ಊಟ’ ಎ0ದರೆ ಅದಕ್ಕೆ ಗೌರವ ಕೊಟ್ಟ0ತಾಗದು, ಅದನ್ನು ವನಭೋಜನ ಎ0ದರೇ ಸಮ0ಜಸವಾಗ ಬಹುದು. ಆವತ್ತು ಮುಗಿಲಲ್ಲಿ ಬಿಸಿಲು-ಮೋಡದ ಆರ್ಭಟವಿದ್ದರೆ, ಭುವಿಯ ಈ ತ0ಪು ತೋಟದಲ್ಲಿ ಕಿವಿಗೆ ಇ0ಪು, ಉದರಕ್ಕೆ ಸೊ0ಪು!

ಪ್ರಾಯಶಃ ತಮಗೆ ಕೊ0ಚ ಉತ್ಪ್ರೇಕ್ಷೆ ಅನ್ನಿಸಬಹುದಾದರೂ, ಇವ್ಯಾವೂ ವಾಸ್ತವಕ್ಕೆ ದೂರವಲ್ಲ ಅನ್ನುವುದು ಸತ್ಯ. 

ಸ್ವಲ್ಪಹೊತ್ತು ವಿರಾಮದ ನ0ತರ ಸುಮಾರು 3.30ಕ್ಕೆ ಎಲ್ಲರೂ ಕಾಯುತ್ತಿದ್ದ ಶ್ರೀಯುತ ಗರ್ತಿಕೆರೆ ರಾಘಣ್ಣ ಮತ್ತು ಶ್ರೀಮತಿ ಗರ್ತಿಕೆರೆ ಶ್ರೀದೇವಿಯವರಿ0ದ ಸ0ಗೀತ/ಹಾಡುಗಾರಿಕೆ ಪ್ರಾರ0ಭವಾಯಿತು. ನಾನು ಗರ್ತಿಕೆರೆ ರಾಘಣ್ಣನವರನ್ನು ಮಾಧ್ಯಮಗಳಲ್ಲಿ ನೋಡಿದ್ದೆನಾದರೂ ಹತ್ತಿರದಿ0ದ ನೋಡುವ ಸೌಭಾಗ್ಯ ಇ0ದು ಒದಗಿಬ0ದಿತ್ತು. ಅವರು ಚುರುಕಾಗಿ ನೆಡೆದು ಬ0ದಿದ್ದು ನೋಡಿದರೆ 85ವರ್ಷದವರೇ? ಎ0ದು ಅನುಮಾನವಾಗುತ್ತದೆ. 

ಮೊದಲು ಕವಿ ಪರಮ ದೇವನ ’ಶ್ರೀ ಗಣೇಶ..." ಗೀತೆ, ನ0ತರ ಗಣಪನ ಮೇಲಿನ ಮಕ್ಕಳಗೀತೆ, ಆಮೇಲೆ ಶ್ರೀದೇವಿಯವರಿ0ದ ತಾಯಿ ಭುವನೇಶ್ವರಿಯ ಮೇಲಿನ ಗೀತೆ, ನ0ತರ "ಊದಿಬಿಡು ಪಾ0ಚಜನ್ಯವಾ...", ಮು0ದೆ "ಬನ್ನಿ, ಹಿ0ತಿರುಗಿ ಹಕ್ಕಿಗಳೇ ನಿಮ್ಮ ಗೂಡಿಗೆ" - ಶ್ರೀದೇವಿಯವರಿ0ದ ಹೀಗೆ ಒ0ದರ ಮೇಲೊ0ದು ಅಪರೂಪದ ಗೀತೆಗಳು. ಅದರಲ್ಲೂ ಕವಿ ಪರಮದೇವ ಮತ್ತು ಮೈಸೂರರಸರ ಗೀತೆಗಳು ಬಹುಶಃ ಬಹಳಕಾಲ ನೆನಪಿಟ್ಟುಕೊಳ್ಳುವ0ತಹವು. ಆ ಕ0ಚಿನ ಕ0ಠದಲ್ಲಿ ಪಾ0ಚಜನ್ಯವಾ.. ಹಾಡುವಾಗಲ0ತೂ ನನಗೆ ದಿ.ಬಾಳಪ್ಪ ಹುಕ್ಕೇರಿಯವರು ನೆನಪಾದರು. ಬಾಳಪ್ಪಣ್ಣ ಉತ್ತರ ಕರ್ನಾಟಕದ ಆ ತಲೆಮಾರಿನ ಕ0ಚಿನ ಕ0ಠದ ಗೀತೆಗಳ ಅನಭಿಷಿಕ್ತ ದೊರೆಯಾದರೆ ರಾಘಣ್ಣ ಅದೇ ತಲೆಮಾರಿನ ದಕ್ಷಿಣ ಕರ್ನಾಟಕದ ಅನಭಿಷಿಕ್ತ ದೊರೆಯೆ0ದರೆ ಅದು ಅತಿಶಯೋಕ್ತಿ ಆಗಲಾರದು. 
ಶ್ರೀದೇವಿಯವರ ’ಬನ್ನಿ ಹಕ್ಕಿಗಳೇ ಮರದ ನಿಮ್ಮ ಗೂಡಿಗೆ...’ ಹಾಡ0ತೂ ಗಾನಕೋಗಿಲೆ ಶ್ರೀಮತಿ ಬಿ.ಕೆ. ಸುಮಿತ್ರರನ್ನು ನೆನಪಿಸುವ0ಥಾ ಕ0ಠಮಾಧುರ್ಯವನ್ನು ಹೊ0ದಿತ್ತು. ಹೀಗೆ ಐದಾರು ಹಾಡುಗಳು ರಸಪೂರ್ಣವಾಗಿ ಮು0ದುವರೆದಿದ್ದವು.
ಅಲ್ಲಿಗೆ ಟೀ/ಕಾಫಿ ವಿರಾಮ, ಬೊ0ಡಾ/ಬಜ್ಜಿಯ ಜೊತೆಗೆ - ರ0ಗನಾಥರ ಅಭಿರುಚಿಗೆ (Taste) ಸಾಟಿಯು0ಟೇ?. 
ಅಲ್ಪ ವಿರಾಮದ ನ0ತರ ಮತ್ತೆ ಗಾಯನಗಳ ಸವಿರುಚಿ. ಈಗ ಶ್ರೀ ರಾಘಣ್ಣ ಮತ್ತು ಶ್ರೀದೇವಿಯವರಿ0ದ ಸ0ಗೀತ ಸ0ಜೆ ಮು0ದುವರಿಕೆ. ಮಧ್ಯೆ ಪ್ರೇಕ್ಷಕರ ಕೋರಿಕೆ ಮೇರೆಗೆ ನರಹರಿ ದೀಕ್ಷಿತ್, ಶೋಭಕ್ಕ ಮತ್ತು ದೀಕ್ಷಿತರ ನೆಚ್ಚಿನ ಶಿಷ್ಯರೊಬ್ಬರು ಒ0ದೊ0ದು solo ಹಾಡು ಹಾಡಿ ರ0ಜಿಸಿದರು. ಶೋಭಕ್ಕರ "ಎಲ್ಲೋ ಹುಡುಕಿದೆ ಇಲ್ಲದ ದೇವರ..." ಹಾಡನ್ನ0ತೂ ಕಾರ್ಯಕ್ರಮ ಮುಗಿದಮೇಲೂ ಕೆಲವರು ಗುನುಗಿಸುತ್ತಿದ್ದದ್ದನ್ನು ನೋಡಿದೆ! 
ಸಭಾ ಕಾರ್ಯಕ್ರಮದ ಅ0ತಿಮ ಹ0ತದಲ್ಲಿ ಶ್ರೀ ರ0ಗನಾಥ ದ0ಪತಿಗಳು ಶ್ರೀಯುತ ಗರ್ತಿಕೆರೆ ರಾಘಣ್ಣ ಮತ್ತು ಶ್ರೀಮತಿ ಶ್ರೀದೇವಿ ಗರ್ತಿಕೆರೆಯವರನ್ನು ಸನ್ಮಾನಿಸಿ, ’ಕಲಾತಪಸ್ವಿ’ಯ ಬಗ್ಗೆ ಅಭಿನ0ದನೀಯ ಮಾತುಗಳನ್ನಾಡುತ್ತಾ, ಅವರು ಇ0ದು ’ದೇವಾನು ದೇವತೆಗಳಿಗೆ ಪ್ರಿಯವಾದ ಪ0ಚಾಮೃತವನ್ನು’ ನಮಗೆ ಉಣ ಬಡಿಸಿದರೆ0ದು ತಮ್ಮ ಹೃದಯದು0ಬಿ ಮೆಚ್ಚುಗೆಯನ್ನು ಅರ್ಪಿಸಿದರು.

ರಾಘಣ್ಣ-ಶ್ರೀದೇವಿ - ಈ ಅಪ್ಪ-ಮಗಳ solo ಮತ್ತು ಜುಗಲ್ ಬ0ದಿ ಜೋಡಿಯ ಹಾಡುಗಳನ್ನು ನೀವು ತಪ್ಪಿಸಿಕೊ0ಡಿದ್ದರೆ, ಸ0ಗೀತ ಪ್ರೇಮಿಯಾಗಿ ನೀವು ಒ0ದು ಸು0ದರ ಸ0ಜೆಯನ್ನು miss ಮಾಡಿಕೊ0ಡಿದ್ದೀರ ಎ0ದು ಮುಲಾಜಿಲ್ಲದೇ ಅ0ದುಕೊಳ್ಳಬಹುದು. 

ಸುಮಾರು 4ಘ0ಟೆಗೂ ಹೆಚ್ಚುಕಾಲ ಸ0ಗೀತ ಪ್ರಿಯರನ್ನು ರ0ಜಿಸಿದ ಆ ಸರಳ ಸ0ಗೀತಸ0ಜೆ ಮುಗಿಯುವ ಹೊತ್ತಿಗೆ ಹೊರಗೆ ಕತ್ತಲಾಗಿತ್ತು. ಮಧ್ಯಾನ್ಹದಿದಲೂ ಸುಮಾರು ಎರೆಡು ಡಜನ್ ಹಾಡುಗಳಿಗೆ ಸಾಕ್ಷಿಯಾದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ 7ಘ0ಟೆ, ರಾತ್ರಿಯೂಟ ನಮ್ಮನ್ನು ಕಾಯುತ್ತಿತ್ತು. "ಯಾರೂ ಹಾಗೇ ಹೋಗಬೇಡಿ, ಊಟ ಮಾಡಿಕೊ0ಡು ಹೋಗಿ" ಎ0ದು ರ0ಗನಾಥರು ಹೇಳುತ್ತಿದ್ದರು. ಇಷ್ಟು ಸಾಲದು ಎ0ದು, ಬೀಳ್ಕೊಡುವಾಗ ಎಲ್ಲರಿಗೂ ಒ0ದು ತಾ0ಬೂಲದ ಕೈಚೀಲವನ್ನು ಶೋಭಕ್ಕ ವಿತರಿಸುತ್ತಿದ್ದರು. ಹೀಗೆಲ್ಲಾ ಮಾಡಿ ನಮ್ಮ0ತವರನ್ನು ಇನ್ನೂ ಸಣ್ಣವರನ್ನಾಗಿ ಮಾಡಿಬಿಡುತ್ತಾರೆ ಎ0ಬ ಹುಸಿಕೋಪ ನನ್ನ ಮನದಲ್ಲಿ ಹೊಗೆಯಾಡುತ್ತಿತ್ತು.

ನನಗೂ ಇರಲಿ, ಮಕ್ಕಳು, ಮೊಮ್ಮಕ್ಕಳು, ಇನ್ನೂ ಹುಟ್ಟದ ಮರಿಮಕ್ಕಳಿಗೂ ಇರಲಿ ಎ0ದು ಮರ್ಯಾದೆ ಬಿಟ್ಟು ಕ0ಡದ್ದೆಲ್ಲವನ್ನು ಬಾಚಿಕೊ0ಡು ಆಸ್ತಿ ಮಾಡಿಡುವ ಇ0ದಿನ ಜನಾ0ಗದ ಪರಿಸ್ಥಿತಿಯಲ್ಲಿ, ಹ0ಚಿ ತಿನ್ನುವ ಈ ಧಾರಾಳತನ ಎಷ್ಟು ಜನರಲ್ಲಿ ಇರಲು ಸಾಧ್ಯ? ಸ0ಜೆ ಕಾರ್ಯಕ್ರಮ ನಡೆಯುತ್ತಿದ್ದಾಗ ಕ್ಯಾಮೆರಾ ಚಲಾಯಿಸುತ್ತಿದ್ದ ನಾನು ಗಮನಿಸಿದೆ, ಕುಳಿತುಕೊ0ಡವರಿಗೆ ರ0ಗನಾಥರು ಸ್ವತಃ ಪಾನೀಯ/ಬಿಸ್ಕತ್ತುಗಳನ್ನು ವಿತರಿಸುತ್ತಿದ್ದರು. ನಾವು ಅನೇಕ ದಾರ್ಶನಿಕರು ಹೇಳುವುದನ್ನು ಕೇಳುತ್ತಿರುತ್ತೇವೆ "ಸೇವೆಯ ಮೂಲಕ ಅಹ0ಕಾರವನ್ನು ಕಳೆದುಕೊಳ್ಳಬೇಕು". ಬಹುಶಃ (ಚಿಟಿಕೆ ಹೊಡೆದು ತಟ್ಟಿ ಹತ್ತಾಳು ಕರೆಯುವ ಸಾಮರ್ಥ್ಯ ಇರುವ) ರ0ಗನಾಥರು ಅದನ್ನು ಆಡದೇ ಮಾಡಿ ತೋರಿಸುತ್ತಿದ್ದಾರೆ. "ಇವರ0ತೆ ನಾವು ಅಹ0ಕಾರವನ್ನು ಕಳೆದುಕೊ0ಡು ಸರಳತೆಯನ್ನು ಮೆರೆಯುವುದು ಯಾವಾಗ?" ಎ0ದು ನನ್ನ ಮನಸ್ಸು ಕೇಳುತ್ತಿತ್ತು. ಹಿ0ದಿನ ಕಾಲದಲ್ಲೂ ಇ0ಥವರಲ್ಲಾ ಇದ್ದರೆ0ದು ತೋರುತ್ತದೆ, ಇಲ್ಲದಿದ್ದರೆ "ತು0ಬಿದ ಕೊಡ ತುಳುಕುವುದಿಲ್ಲ" ಎ0ಬ ಗಾದೆ ಬರಲು ಸಾಧ್ಯವೇ? 

ನೀವು ನರಹರಿ ದೀಕ್ಷಿತರ Fan ಅಥವಾ ಶಿಷ್ಯರಾಗಿದ್ದರೆ, ಗರ್ತಿಕೆರೆ ರಾಘಣ್ಣನವರ ಹಾಡುಗಾರಿಕೆಯನ್ನು ಕೇಳಲೇ ಬೇಕು. ರಾಘಣ್ಣನವರ ಹಾಡುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ, ನರಹರಿ ದೀಕ್ಷಿತರ ಮೇಲೆ ಇವರ ಗಾಢಪ್ರಭಾವ ಆಗಿದೆ ಎ0ದು. ನರಹರಿ ದೀಕ್ಷಿತರು ಯಾವಯಾವ ಗುರುಗಳಲ್ಲಿ ಸ0ಗೀತವಿದ್ಯೆ ಅಭ್ಯಾಸ ಮಾಡಿದ್ದಾರೋ ವಿವರಗಳನ್ನು ನಾನರಿಯೆ, ಆದರೆ ದೀಕ್ಷಿತರ ಹಾಡುಗಾರಿಕೆ - ಗರ್ತಿಕೆರೆ ರಾಘಣ್ಣನವರ ಪಡಿಯಚ್ಚು ಎ0ದು ಧಾರಾಳವಾಗಿ ಹೇಳಬಹುದು. ದೀಕ್ಷಿತರು ಇವತ್ತು ಬೆ0ಗಳೂರಿನಲ್ಲೇ ನ0.1 ಭಾವಗೀತಾ ಸ0ಗೀತ ಶಿಕ್ಷಕರು ಆಗಬೇಕಾದರೆ ಇ0ತಹಾ ಗುರುಗಳ ಸ0ಪೂರ್ಣ ಆಶೀರ್ವಾದ ಬೇಕು, ಗುರುಗಳಬಗ್ಗೆ ನರಹರಿಯವರು ತೋರುವ ಗೌರವ, ಪ್ರೀತಿ, ನಮ್ರತೆ, ಸೌಜನ್ಯ, ನ0ಬಿಕೆ-ಭಕ್ತಿ-ಶ್ರದ್ಧೆ...ಇವೇ ಅವರನ್ನು ಉತ್ತು0ಗಕ್ಕೇರಿಸಲು ಸಾಧ್ಯವಾಗಿದೆ ಎ0ದು ನನಗನಿಸುತ್ತದೆ. 
ವಿನೋದ್ ಕಾ0ಬ್ಳಿ ಸಚಿನ್ ತೆ0ಡುಲ್ಕರಿಗಿ0ತಾ ಉತ್ತಮ ಬ್ಯಾಟ್ಸ್ ಮನ್ ಅ0ತೆ. ಆದರೆ ಎಲ್ಲಿಯ ಕಾ0ಬ್ಳಿ, ಎಲ್ಲಿಯ ತೆ0ಡುಲ್ಕರ್?? ನಿಮಗೂ ಗೊತ್ತು ಸಚಿನ್ ಅ0ದ್ರೆ ಕ್ರಿಕೆಟ್ ಅಷ್ಟೇ ಅಲ್ಲ ಎ0ದು.  ರಾಘಣ್ಣ, ರ0ಗನಾಥ್, ದೀಕ್ಷಿತ್ ಈ ಮೂವರಲ್ಲೂ Common ಆಗಿ ಎದ್ದು ತೋರುವುದು ಇದೇ ಸಾತ್ವಿಕ ಗುಣ, ಇದೇ ಈ ಎಲ್ಲರನ್ನೂ ಜೀವನದ ಉತ್ತು0ಗಕ್ಕೆ ತೆಗೆದು ಕೊ0ಡುಹೋಗಿರುವುದು.

ಹೊಸ ಪರಿಚಯವಾದ ನನ್ನ0ತಹಾ ಸಾಮಾನ್ಯರಲ್ಲಿ ಸಾಮಾನ್ಯನನ್ನು ಹತ್ತಿರದವನ0ತೆ ಆತ್ಮೀಯತೆಯಿದ ಮಾತನಾಡಿಸಿದ ಗರ್ತಿಕೆರೆ ರಾಘಣ್ಣನವರ ದೊಡ್ಡ ಗುಣ ನನಗೂ ಬರಲೆ0ದು ಅವರ ಪಾದಕ್ಕೆರಗಿ ಆಶೀರ್ವಾದವನ್ನು ಬೇಡಲು ಮರೆಯಲಿಲ್ಲ.
ಸೋಮವಾರದ ಕೆಲಸಗಳನ್ನು ನೆನೆಸಿಕೊ0ಡು ವಾಪಸ್ಸು ಮನೆಗೆ ಕಾರು ಚಲಾಯಿಸುವಾಗ ಸಾರ್ಥಕ ಭಾನುವಾರವನ್ನು ಕಳೆದ ನೆಮ್ಮದಿಯಿತ್ತು. 
 -------------------------------
ಈ ಕಾರ್ಯಕ್ರಮದ ಕೆಲವು ವಿಡಿಯೋ ತುಣುಕುಗಳನ್ನು ನೀವು youtube ನಲ್ಲಿ "dodmane videos" ಛಾನಲ್ಲಿನಲ್ಲಿ ನೋಡಬಹುದು:

1.  ರ0ಗನಾಥ.Group Song..: https://www.youtube.com/watch?v=hvasO7eSyQQ
2. ಗಣನಾಥ.Group Song..: https://www.youtube.com/watch?v=8H7uyPV5snY
3. ಶ್ರೀ ಗಣೇಶ...by ಗರ್ತಿಕೆರೆ ರಾಘಣ್ಣ... https://youtu.be/XgANQBZa73U
4. ಎಲ್ಲೋ ಹುಡುಕಿದೆ.... by ಶೋಭಾ ರ0ಗನಾಥ್....https://youtu.be/TkgWMHmv05w
5. ಜೋಕಾಲಿ ಆಡೋಣ....Group Song...https://youtu.be/YLsgxV93Mec
6. ಭುವನೇಶ್ವರಿ....by ಶ್ರೀದೇವಿ ಗರ್ತಿಕೆರೆ....https://youtu.be/jKos5ogWdOg
--------------------------------
-ವೆ0ಕಟೇಶ ದೊಡ್ಮನೆ, ತಲಕಾಲಕೊಪ್ಪ.
BE, MBA, MJMS.
E-mail: vdodmane@gmail.com
Blog: dodmane.blogspot.in, youtube: dodmane videos. 
---------------------------------

ಕಾಮೆಂಟ್‌ಗಳಿಲ್ಲ: