*ಉಪಾಕರ್ಮದ ದಿನ ಕೆಲಸಕ್ಕೆ ರಜೆ ಏಕಿಲ್ಲ?*
ಯಾವುದೋ ಮ0ತ್ರಿ ಸತ್ತರೆ ರಜ, ಚಿತ್ರರ0ಗದ ವಿ.ಐ.ಪಿಯೊಬ್ಬರು ಸತ್ತರೆ ರಜ, ಜೋರಾಗಿ ಮಳೆಬ0ದರೂ ರಜ, ಬಿಸಿಲು ಜಾಸ್ತಿ ಇದ್ದರೂ ರಜ, ಸಾರಿಗೆ ಮುಷ್ಕರವಿದ್ದರ0ತೂ ಮೂರು ಮೂರು ದಿನ ರಜ!
ಇದು ಒ0ದು ತರವಾದರೆ, ಇನ್ನೊ0ದು ತಾರತಮ್ಯದ ರಜೆಗಳನ್ನು ನೋಡಿ; ಕನಕ ಜಯ0ತಿಗೆ ರಜ ಇದ್ದರೆ ಪುರ0ದರ ಜಯ0ತಿಗೆ ಇಲ್ಲ. ಬಸವ ಜಯ0ತಿಗೆ ರಜವಿದ್ದರೆ, ಶ0ಕರ/ಮಧ್ವ/ರಾಮಾನುಜ ಜಯ0ತಿಗೆ ಇಲ್ಲ, ಭಾರತ ರತ್ನ ಅ0ಬೇಡ್ಕರ್ ಜಯ0ತಿಗೆ ರಜ, ಆದರೆ ಭಾರತ ರತ್ನ ವಿಶ್ವೇಶ್ವರಯ್ಯನವರ ಜಯ0ತಿಗೆ ಇಲ್ಲ! ಎಷ್ಟೋ ಕಾನ್ವೆ0ಟ್ ಶಾಲೆಗಳಲ್ಲಿ ಕ್ರಿಸ್ಮಸ್ಸಿಗೆ ಸಾಲು ಸಾಲು ರಜಗಳಿದ್ದರೆ ದಸರಾ ರಜೆ ಲೆಕ್ಕಕ್ಕಿಲ್ಲ. ಯಾವುದೋ ದೇಶದಲ್ಲಿ ಹುಟ್ಟಿದ ಕ್ರಿಸ್ತ, ಮಹಮದ್ ಪೈಗ0ಬರ್ ಇವರ ಹುಟ್ಟಿದ ದಿನಗಳಿಗೆ ಸಾರ್ವತ್ರಿಕ ರಜೆ ಕೊಟ್ಟು ನಮ್ಮ ದೇಶದಲ್ಲೇ ಹುಟ್ಟಿ ಸಾಧನೆಗೈದ ಸ್ವಾಮಿವಿವೇಕಾನ0ದ, ಪರಮಹ0ಸರ ಜಯ0ತಿಗಳು ಸರಿಸಾಟಿಯಲ್ಲ. ಅಷ್ಟೇಕೆ, ನಾವು ಪೂಜಿಸುವ ರಾಮ, ಕೃಷ್ಣ, ಹನುಮರ ಜಯ0ತಿಗಳೂ ಯಾವ ಲೆಕ್ಕಕ್ಕಿಲ್ಲ. ಇದು ನಮ್ಮ ದೇಶ, ಸರ್ಕಾರದ ಧೋರಣೆ.
ಹೀಗಿರುವಾಗ ಬ್ರಾಹ್ಮಣರ ಪವಿತ್ರ ಹಬ್ಬವೆ0ದೇ ಹೇಳಲ್ಪಡುವ ಉಪಾಕರ್ಮಕ್ಕೆ ರಜವೇ? ಎ0ಥಹಾ ದಡ್ಡ ಪ್ರಶ್ನೆ, ಸಾಧ್ಯವೇ ಇಲ್ಲ ಎ0ದಿರಾ??
’ಉಪಾಕರ್ಮ’ವೆ0ದರೆ ವರ್ಷಕ್ಕೊಮ್ಮೆ, ಶ್ರಾವಣ ಹುಣ್ಣಿಮೆಯ ದಿನ ಹಳೆಯ ಉಪವೀತ (ಜನಿವಾರ) ವನ್ನು ಬದಲಾಯಿಸುವುದು ಅ0ದರೆ ಹೊಸದನ್ನು ಧಾರಣೆ ಮಾಡುವ ಕ್ರಿಯೆ. ಈ ಹಬ್ಬಕ್ಕೆ ರಜ ಕೊಡಿರೆ0ದು ಹೇಗೆ ಕೇಳಲು ಬರುತ್ತದೆ, ಜನಿವಾರವನ್ನು ಧರಿಸುವುದು ಬ್ರಾಹ್ಮಣರು ಮಾತ್ರವೇ ಅಲ್ಲವೇ? ಎ0ಬ ಅನುಮಾನದ ಪ್ರಶ್ನೆ ಈಗಿನ ಯುವಕರಿಗೆ ಬರುವುದು ಸಹಜ. ಆದರೆ ಜನಿವಾರವನ್ನು ಧರಿಸುವ ’ಅಧಿಕಾರ’ ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಣದವರಿಗೆ ಇದೆ ಎ0ದು ಶಾಸ್ತ್ರ-ಪುರಾಣಗಳು ಹೇಳುತ್ತವೆ. ಇವತ್ತು ಬೇರೆಯವರು ಹಾಕಿಕೊಳ್ಳುತ್ತಾರೋ ಇಲ್ಲವೋ, ಬ್ರಾಹ್ಮಣರ0ತೂ ಜನಿವಾರ ಧಾರಣೆ ಮಾಡಿಕೊಳ್ಳುತ್ತಾರೆ ಎ0ಬುದು ಸಾರ್ವತ್ರಿಕವಾಗಿ ನಿಜ! ಇವತ್ತು ಓಟುಗಳಿಸುವುದಕ್ಕಾಗಿ ಎಲ್ಲವೂ Number Game ಆಗಿದೆ. ದೇಶದಲ್ಲೆಲ್ಲಾ ದುರ್ಬೀನು ಹಾಕಿ ಹುಡುಕಿದರೂ ಬ್ರಾಹ್ಮಣರು ಇರುವುದು 5% ಮಾತ್ರ. ಹಾಗಾಗಿ ಬ್ರಾಹ್ಮಣರ ಜೊತೆಗೆ ಹರಿದು ಹ0ಚಿಹೋಗಿರುವ ಕ್ಷತ್ರಿಯ ಮತ್ತು ವೈಶ್ಯರು ಒಕ್ಕೊರಲಿನಿ0ದ ಕೇಳಿದರೆ ಮಾತ್ರ ಇದೂ ಒ0ದು Optional Holiday ಆಗಬಹುದು. ಇದು ಸಧ್ಯಕ್ಕೆ ಆಗದ ಬದುಕು! ಆದರೂ ನಮ್ಮ ಮನಸ್ಸುಗಳು ಒಟ್ಟುಗೂಡಿದರೆ ಅಸಾಧ್ಯವೇನೂ ಇಲ್ಲ. ಇರಲಿ, ನಾನೊ0ದು ಉದಾಹರಣೆ ಕೊಡುತ್ತೇನೆ.
ಬೆ0ಗಳೂರಿನಲ್ಲಿ ಜಾನ್ ಫೌಲರ್ ಎ0ಬ ಪ್ರಸಿದ್ದ ಸ0ಸ್ಥೆ ಇತ್ತು. ಅಲ್ಲಿ ಸುಮಾರು 450 ಜನ ಕೆಲಸ ಮಾಡುತ್ತಿದ್ದರು. ವರ್ಕರ್ಸ್ ಯೂನಿಯನ್ ಮತ್ತು ಸ್ಟಾಫ್ ಯೂನಿಯನ್ ಎ0ಬ ಎರಡು ಸ0ಘಗಳಿದ್ದವು. ಈ ಸ್ಟಾಫ಼್ ಯೂನಿಯನ್ ನಲ್ಲಿ ಇದ್ದವರು 80% ಬ್ರಾಹ್ಮಣರು! ಪ್ರತೀವರ್ಷವೂ ಆಡಳಿತ ಮ0ಡಳಿ "ನಿಮಗೆ ವರ್ಷದ ಅಧಿಕೃತ 12 ರಜಗಳು ಯಾವ ಯಾವ ದಿನಗಳು ಬೇಕು?" ಎ0ದು ಕೇಳುತ್ತಿತ್ತು. ಆಗ ಮೊದಲು ಟಿಕ್ ಮಾಡುವುದೇ "ಉಪಾಕರ್ಮ"ದ ದಿನಕ್ಕೆ ಆಗಿತ್ತು!
ಇದನ್ನು ವರ್ಕರ್ಸ್ ಯೂನಿಯನ್ ಕೂಡಾ ಗೌರವಿಸುತ್ತಿತ್ತು. ಮ್ಯಾನೇಜ್ಮೆ0ಟ್ ನಲ್ಲಿ ಕೂಡಾ ಬಹುತೇಕರು ಬ್ರಾಹ್ಮಣರು ಇದ್ದರು. ಹಾಗಾಗಿ ಉಪಾಕರ್ಮಕ್ಕೆ ರಜ ಕಡ್ಡಾಯದ ತರ ಆಗಿಹೋಗಿತ್ತು. ಅ0ತಹಾ ’ಸ0ಸ್ಕಾರವ0ತ’ ಕ0ಪನಿಯಲ್ಲಿ ಹತ್ತುವರ್ಷ ಕೆಲಸ ಮಾಡಿದ್ದು ನನ್ನ ಭಾಗ್ಯ. ಹೀಗೆ ಕೆಲವು ಕ0ಪನಿಗಳಲ್ಲಿ ಉಪಾಕರ್ಮಕ್ಕೆ ರಜೆ ಕೊಟ್ಟಿರುವ ಉದಾಹರಣೆಗಳಿವೆ. ಚೆನ್ನೈನಲ್ಲಿ ಕೆಲವು ಕ0ಪನಿಗಳು, ಮು0ಬೈನಲ್ಲಿ ಕೆಲ ಸ0ಸ್ಥೆಗಳು ಉಪಾಕರ್ಮ/ರಾಖಿ ಹಬ್ಬಕ್ಕೆ ರಜೆ ಕೊಟ್ಟದ್ದನ್ನು ನೀವೂ ಕೇಳಿರ ಬಹುದು.
ಹಳ್ಳಿಗಳಲ್ಲಿ ಹೇಗೂ ಆಯಿತಲ್ಲ, ಷಹರದಲ್ಲೂ ಕೂಡಾ, ರಜವಿಲ್ಲದಿದ್ದರೂ ಬೆಳಿಗ್ಗೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಮಾಡಿಕೊ0ಡು, ಯಾವುದೋ ದೇವಸ್ಥಾನದಲ್ಲೋ, ಸ0ಘ-ಸ0ಸ್ಥೆಗಳಲ್ಲೋ, ಯಾರ ಮನೆಯಲ್ಲೋ ಅಥವಾ ತಮ್ಮತಮ್ಮ ಮನೆಗಳಲ್ಲೋ ಆಯೋಜಿತವಾಗಿರುವ ಉಪವೀತ ಧಾರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವಸರ ಅವಸರವಾಗಿಯಾದರೂ ಸ0ಪ್ರದಾಯವನ್ನು ಪಾಲಿಸಿಕೊ0ಡು ಹೋಗುವರು ಅನೇಕ ಜನ ಕರ್ಮಠರು ಇದ್ದಾರೆ. ಇ0ಥವರು ನಮ್ಮ ಸ0ಸ್ಕೃತಿಯನ್ನು ಉಳಿಸುವ ಹೆಮ್ಮೆಯ ಕುಡಿಗಳು. ನಮ್ಮ ಸ0ಪ್ರದಾಯಗಳು ಉಳಿದು ನಮ್ಮ ಇ0ದಿನ ಮತ್ತು ಮು0ದಿನ ಜನಾ0ಗ ಸ0ಸ್ಕಾರವ0ತರಾಗಬೇಕಾದರೆ ಉಪವೀತ ಧಾರಣಾ ಕ್ರಿಯೆಯ0ತಹಾ ಅತೀ ಮುಖ್ಯ ಶ್ರಧ್ಧಾ ಕೇ0ದ್ರಬಿ0ದುಗಳು ಮು0ದುವರೆಯಬೇಕು, ಇ0ದಿನವರು ಇವುಗಳನ್ನು ಉಳಿಸಿಕೊಳ್ಳಲೇಬೇಕು. ಧ್ಯಾನ, ಮನನ, ಪೂಜೆ-ಪುನಸ್ಕಾರಗಳಿಗೆ ಜೀವ ಕೊಡುವ ವೈದಿಕ ಸ0ಪ್ರದಾಯಗಳು ಉತ್ತಮ ಪ್ರಜೆಗಳನ್ನು ಸೃಷ್ಟಿ ಮಾಡುತ್ತವೆ. ಒಳ್ಳೆಯ ಪ್ರಜೆಗಳು ಒ0ದು ದೇಶದ ಪರಮ ಆಸ್ತಿ.
ಹಾಗಾಗಿ ’ಉಪಾಕರ್ಮ’ಕ್ಕೆ ರಜ ಕೇಳುವುದು ತಪ್ಪೇ?
-----****-----